25 ಕೋಟಿ ರೂ ಗಳಿಸಿದ ಸ ಹಿ ಪ್ರಾ ಶಾಲೆ ಕಾಸರಗೂಡು

ಈ ನಡುವೆ ಕನ್ನಡದಲ್ಲಿ ಹೊಸಬರ ಅದರಲ್ಲೂ ಕಡಿಮೆ ಬಜೆಟ್ಟಿನ ಚಿತ್ರಗಳೇ ಹಿಟ್ ಆಗುತ್ತಿವೆ. ಕಳೆದ ವರ್ಷ `ಒಂದು ಮೊಟ್ಟೆಯ ಕಥೆ’ ಸ್ಟಾರ್ ನಟರ ಚಿತ್ರಗಳಿಗಿಂತಲೂ ಹೆಚ್ಚು ಪ್ರೇಕ್ಷಕರನ್ನು ಸೆಳೆದಿತ್ತು. ಈ ವರ್ಷ ರಿಷಬ್ ಶೆಟ್ಟಿ ನಿರ್ದೇಶನದ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು’ ಸಿನಿಮಾ ಸೂಪರ್ ಹಿಟ್ ಆ ಈಗಾಗಲೇ 50 ದಿನಗಳನ್ನು ಪೂರೈಸಿದ್ದು ಕೆಲವೆಡೆ ಇನ್ನೂ ಥಿಯೆಟರಿನಲ್ಲಿ ಓಡುತ್ತಿದೆ. ಈ ಸಿನಿಮಾ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಈ ಚಿತ್ರ ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಹೆಸರು ಮಾಡಿದೆ. ಅಮೆರಿಕಾದಲ್ಲಂತೂ ಈ ಚಿತ್ರ ಚೆನ್ನಾಗಿ ಕಲೆಕ್ಷನ್ ಮಾಡಿದೆ.

ಅನಂತನಾಗ್ ಹಾಗೂ ಬಾಲ ಕಲಾವಿದರಾದ ರಂಜನ್, ಸಂಪತ್ ಮೊದಲಾದವರು ಅಭಿನಯಿಸಿರುವ ಈ ಸಿನಿಮಾಗೆ ಖರ್ಚು ಮಾಡಿದ್ದು ಬರೀ 2 ಕೋಟಿ ರೂ ಮಾತ್ರ.

***

Note from Kannada.Club : This story has been auto-generated from a syndicated feed from http://karavaliale.net/kasaragudu-is-a-school-that-has-earned-rs-25-crore/