ಹೃತಿಕ್ ಚಿತ್ರದಿಂದ ವಿಕಾಸ್ ಔಟ್

# ಮೀ ಟೂ ಇಫೆಕ್ಟ್

ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿಸಿದ್ದ ಬಾಂಬ್ ಈಗ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಸಿನಿರಂಗದಲ್ಲಂತೂ  ಒಬ್ಬೊಬ್ಬರಾಗಿಯೇ ತಮಗಾದ ಕಹಿ ಅನುಭವವನ್ನು ಬಹಿರಂಗ ಪಡಿಸಲು ಮುಂದಾಗಿದ್ದಾರೆ. ನಿರ್ದೇಶಕ ವಿಕಾಸ್ ಬೆಹ್ಲ್ ವಿರುದ್ಧ ಕಂಗನಾ ರಣೌತ್ ಸೇರಿದಂತೆ ಇಬ್ಬರು ನಟಿಯರು ಆತ ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸೆದಿದ್ದ ಎನ್ನುವ ಆರೋಪ ಮಾಡಿದ್ದರು. ಹೃತಿಕ್ ರೋಷನ್ ನಟನೆಯ `ಸೂಪರ್ 30′ ಚಿತ್ರವನ್ನು ವಿಕಾಸ್ ಬೆಹ್ಲ್ ನಿರ್ದೇಶಿಸುತ್ತಿದ್ದು ಇದೀಗ ಹೃತಿಕ್ `ಇಂಥ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ನನ್ನಿಂದ ಅಸಾಧ್ಯ’ ಎಂದಿದ್ದು ವಿಕಾಸ್‍ನನ್ನು ಸಿನಿಮೇಕರ್ಸ್ ಆ ಚಿತ್ರದಿಂದಲೇ ಹೊರಹಾಕಿದ್ದಾರೆ.

ಹೃತಿಕ್ ತನ್ನ ಟಿಟ್ಟರ್ ಅಕೌಂಟಿನಲ್ಲಿ `ಅಸಭ್ಯ ವರ್ತನೆ ತೋರಿರುವವರ ಜೊತೆಗೆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ. ಸತ್ಯ ಅರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದ್ದರೆ ತೆಗೆದುಕೊಳ್ಳಿ ಎಂದು `ಸೂಪರ್ 30′ ನಿರ್ಮಾಪಕರಿಗೆ ಮನವಿ ಮಾಡಿರುವೆ. ಇಂತಹ ವಿಚಾರಗಳನ್ನು ಮುಚ್ಚಿಡಬಾರದು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನೊಂದವರಿಗೆ ಮಾತನಾಡುವ ಧೈರ್ಯ ತುಂಬಬೇಕು’ ಎಂದು ಟ್ವೀಟಿಸಿದ್ದನು. ಇದೀಗ ಚಿತ್ರನಿರ್ಮಾಪಕರಾದ ಫ್ಯಾಂಟಮ್ ಫಿಲ್ಮ್ಸ್ ಹಾಗೂ ರಿಲಾಯನ್ಸ್ ವಿಕಾಸ್‍ನನ್ನು ನಿರ್ದೇಶಕನ ಹುದ್ದೆಯಿಂದ ಕೈಬಿಟ್ಟಿದ್ದು ಮಾತ್ರವಲ್ಲದೇ ಚಿತ್ರದ ಕ್ರೆಡಿಟ್‍ನಲ್ಲೂ ಆತನ ಹೆಸರನ್ನು ಅಳಿಸಿಹಾಕಲು ನಿರ್ಧರಿಸಿದ್ದಾರೆ. ಈ ಚಿತ್ರವಲ್ಲದೇ ಅಮೆಜಾನ್ ಪ್ರೈಮ್ ವೀಡಿಯೋ ಕೂಡಾ ತಮ್ಮ ಜಾಹೀರಾತು ನಿರ್ದೇಶನದ ಜವಾಬ್ದಾರಿಯನ್ನು ಈ ಮೊದಲು ವಿಕಾಸ್ ಬೆಹ್ಲ್‍ಗೆ ನೀಡಿದ್ದು ಈಗ ಆತನನ್ನು ಆ ಕೆಲಸದಿಂದ ಹೊರದಬ್ಬಿದ್ದಾರೆ.

 

***

Note from Kannada.Club : This story has been auto-generated from a syndicated feed from http://karavaliale.net/vikas-out-of-film-hrithik/