ಹುಲಿ ದಾಳಿಗೆ ಆಕಳು ಬಲಿ

ಕರಾವಳಿ ಅಲೆ ವರದಿ

ಜೋಯಿಡಾ : ತಾಲೂಕಿನ ಕಾಳಿ ಹುಲಿ ಯೋಜನಾ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯದ ಗೋಡಸೇತ್ ಗ್ರಾಮದ ರೈತ ವಳಣೊ ಮಹಾದೇವ ಕುಮಗಾಳಕರ್ ಅವರಿಗೆ ಸೇರಿದ ಆಕಳನ್ನು ರವಿವಾರ ಹುಲಿ ದಾಳಿ ಮಾಡಿ ಸಾಯಿಸಿದೆ.

ಗೋಡಸೇತ್ ಗ್ರಾಮದ ರೈತ ವಳಣೊ ಕುಮಗಾಳಕರ್ ಅವರಿಗೆ ಸೇರಿದ ದನದ ಕೊಟ್ಟಿಗೆಗೆ ರಾತ್ರಿ ವೇಳೆಯಲ್ಲಿ ನುಗ್ಗಿದ್ದ ಹುಲಿಯೊಂದು ಆಕಳನ್ನು ಕಚ್ಚಿ ಸಾಯಿಸಿದೆ. ಇದರಿಂದ ಸಾವಿರಾರು ರೂ ಹಾನಿ ಸಂಭವಿಸಿದೆ. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಸಿ ಎ ಪಾಗದ, ಅರಣ್ಯ ರಕ್ಷಕ ಅಮ್ರುತ್ ಚಲವಾದಿ ಸ್ಥಳ ಪರಿಸಿಲಿಸಿ ಪಂಚಾನಾಮೆ ಮಾಡಿ ಪರಿಹಾರದ ಭರವಸೆ ನೀಡಿದ್ದಾರೆ.

ಕುಂಬಾರವಾಡಾ ವಲಯದ ಚಾಪೋಲಿ ಕಾಳಸಾಯಿ ಗ್ರಾಮದ ಕಾಮರಾಳಿ ಗ್ರಾಮದಲ್ಲಿ ಕಳೆದ 15 ದಿನದಲ್ಲಿ 4 ದನ-ಕರುಗಳು ಹುಲಿಯ ಬಾಯಿಗೆ ತುತ್ತಾಗಿವೆ. ರೈತರಾದ ನಿತೇಶ ನಾಯ್ಕಗೆ ಸೇರಿದ ಎರಡು ಆಕಳು, ಜಾನು ಪ್ರಕಾಶ ನಾಯ್ಕಗೆ ಸೇರಿದ ಒಂದು ಎತ್ತು, ಒಂದು ಆಕಳು ಹುಲಿ ದಾಳಿಗೆ ತುತ್ತಾಗಿದೆ.

***

Note from Kannada.Club : This story has been auto-generated from a syndicated feed from http://karavaliale.net/the-victim-killed-the-tiger/