ಹುಟ್ಟುಹಬ್ಬದ ಸಂತಸದಲ್ಲಿ ನಟಿ ಅಮೂಲ್ಯ: ಫೋಟೋಗಳಲ್ಲಿ ಸಂಭ್ರಮಾಚರಣೆ

ಬೆಂಗಳೂರು: ಸ್ಯಾಂಡಲ್​ವುಡ್​ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಹೊಲಿಗೆ ಯಂತ್ರ ಹಾಗೂ ಸಸಿ ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಶುಕ್ರವಾರ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಹಾಗೂ ಕುಟುಂಬ ವರ್ಗದ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದ ನಾಲ್ವರು ಮಹಿಳೆಯರನ್ನ ಗುರುತಿಸಿ ಅವರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪತಿ ಜಗದೀಶ್​ ಅವರು ಅಮೂಲ್ಯಗೆ ಸಾಥ್​ ನೀಡಿದರು. (ದಿಗ್ವಿಜಯ ನ್ಯೂಸ್​)***

Note from Kannada.Club : This story has been auto-generated from a syndicated feed from http://vijayavani.net/amulya-actress-sandalwood-birthday-fans-film/