ಹಾವನ್ನೆ ನುಂಗಿದ ಕಪ್ಪೆ!

ಎಂ.ಕೆ.ಹುಬ್ಬಳ್ಳಿ: ಹಾವು ಕಪ್ಪೆ ನುಂಗುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಕಪ್ಪೆ, ತನ್ನನ್ನು ನುಂಗಲು ಹೊಂಚು ಹಾಕುತ್ತಿದ್ದ ಹಾವನ್ನೆ ನುಂಗುವ ಸಾಹಸ ಮಾಡಿದ್ದು, ಈ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದೇವಿ ದೇವಸ್ಥಾನ ಓಣಿಯಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಅಪರೂಪದ ದೃಶ್ಯ ಕಂಡ ಗ್ರಾಮಸ್ಥರು ಬೆರಗಾಗಿದ್ದಾರೆ.

ಚರಂಡಿ ಬಳಿ ಕುಳಿತಿದ್ದ ಕಪ್ಪೆಯನ್ನು ಕಂಡ ದೊಡ್ಡ ಹಾವು ಅದನ್ನು ನುಂಗಲು ಹೊಂಚು ಹಾಕುತ್ತಿರುವುದನ್ನು ಗಮನಿಸಿದ ಕಪ್ಪೆ, ಆ ಹಾವನ್ನೆ ನುಂಗಲು ಮುಂದಾಗಿದೆ. ಇದನ್ನು ಕಂಡ ಸ್ಥಳೀಯರು ಕಪ್ಪೆಯ ಬಾಯಿಂದ ಹಾವನ್ನು ಬೇರ್ಪಡಿಸಲು ಮುಂದಾದರೂ, ಬಿಡದ ಕಪ್ಪೆ ಹಾವು ಸಮೇತ ಚರಂಡಿಗೆ ಜಿಗಿದಿದೆ. ಕಪ್ಪೆಯ ಬಾಯಿಗಿ ಸಿಲುಕಿದ ಹಾವು ಪ್ರಾಣ ಬಿಟ್ಟಿದೆ.

***

Note from Kannada.Club : This story has been auto-generated from a syndicated feed from http://vijayavani.net/the-frog-swallowed-a-snake-belgaum/