ಸೆ.15ಕ್ಕೆ ಹಾಲಸಿದ್ಧನಾಥ ಕಾರ್ಖಾನೆಗೆ ಚುನಾವಣೆ

ನಿಪ್ಪಾಣಿ: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಪಂಚವಾರ್ಷಿಕ ಚುನಾವಣೆಯನ್ನು ಸೆ.15ರಂದು ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿ ವತಿಯಿಂದ ಈ ಕುರಿತು ಮಾಹಿತಿ ಪತ್ರ ತಲುಪಿದೆ. ಉಪವಿಭಾಗಾಧಿಕಾರಿ ಗೀತಾ ಕೌಲಗಿ ಚುನಾವಣಾಧಿಕಾರಿ ಆಗಿ ನೇಮಕಗೊಂಡಿದ್ದಾರೆ. ಚುನಾವಣೆ ಸಿದ್ಧತೆ ಕೈಗೊಳ್ಳಲು ಎಸಿ ಅವರು ಕಾರ್ಖಾನೆಗೆ ಸೂಚಿಸಿದ್ದಾರೆ.

ಕಾರ್ಖಾನೆಗೆ ಒಟ್ಟು 23,800 ಸದಸ್ಯರಿದ್ದು, ಪ್ರಸ್ತುತ 20,800 ಸದಸ್ಯರ ಕಚ್ಚಾ ಯಾದಿಯನ್ನು ಡಿಸಿ ಕಚೇರಿಗೆ ರವಾನಿಸಲಾಗಿದೆ. ಗಡಿಭಾಗದಲ್ಲಿ ಸಹಕಾರ ಕ್ಷೇತ್ರದ ಏಕೈಕ ಸಕ್ಕರೆ ಕಾರ್ಖಾನೆ ಇದಾಗಿದೆ.

***

Note from Kannada.Club : This story has been auto-generated from a syndicated feed from http://vijayavani.net/elections-to-halsadnath-factory-for-nippani-se15/