ಸುರಿದ ಮಳೆ, ರೈತರ ಮುಖದಲ್ಲಿ ಕಳೆ

ಗೊಳಸಂಗಿ: ಗ್ರಾಮದಲ್ಲಿ ಬುಧವಾರ ಸಂಜೆ 2 ಗಂಟೆಗೂ ಹೆಚ್ಚುಕಾಲ ಸುರಿದ ಮಳೆಯಿಂದಾಗಿ ಅನ್ನದಾತರ ಮುಖದಲ್ಲಿ ಕಳೆ ಮೂಡಿತು. ಮುಂಗಾರು ಹಂಗಾಮಿನ ಬೆಳೆಗಳಾದ ಸೂರ್ಯಕಾಂತಿ, ತೊಗರಿ, ಈರುಳ್ಳಿ, ಮೆಕ್ಕೆಜೋಳ, ಕಡಲೆ ಮತ್ತಿತರ ಬೀಜಗಳನ್ನು ಗದ್ದೆಗಳಲ್ಲಿ ಬಿತ್ತನೆ ಮಾಡಿದ್ದ ರೈತರು ಬಾರದಿದ್ದ ಮಳೆಗಾಗಿ ಕಂಡ ಕಂಡ ದೇವರಲ್ಲಿ ಪ್ರಾರ್ಥಿಸಿದ್ದರು. ಬುಧವಾರದ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಇಮ್ಮಡಿಯಾಯಿತು. ಮಳೆ ಸುರಿದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು.

***

Note from Kannada.Club : This story has been auto-generated from a syndicated feed from http://vijayavani.net/golasangi-village-rain-road-water/