ಸರ್ಕಾರದ ಹಂಗಿಲ್ಲದೆ ಮಲೆನಾಡು ಸೊಸೈಟಿ ಪ್ರಗತಿ: ಎಚ್.ಡಿ.ದೇವೇಗೌಡ ಪ್ರಶಂಸೆ

ಶಿವಮೊಗ್ಗ: ಸರ್ಕಾರದ ಹಂಗಿಲ್ಲದೆ ಕೇವಲ 7.5 ಲಕ್ಷ ರೂ.ದಿಂದ 83 ಕೋಟಿ ರೂ.ವರೆಗೆ ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಮಲೆನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.

ಗಾಡಿಕೊಪ್ಪದ ಲಗಾನ್ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಮಲೆನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ಪ್ರತಿ ಹಂತದಲ್ಲೂ ಪ್ರಗತಿ ಸಾಧಿಸುತ್ತಾ ಬಂದಿದೆ. ಮನೆ ನಿರ್ವಣ, ನಿವೇಶನ ಮತ್ತು ವಾಹನಗಳ ಖರೀದಿ ಸೇರಿ 27 ವಿವಿಧ ಯೋಜನೆಗಳಿಗೆ ಸಾಲ ವಿತರಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಮಲೆನಾಡು ಸೊಸೈಟಿಯು ಸಹಕಾರ ಕ್ಷೇತ್ರದಲ್ಲಿ ಹೊಸ ಆಂದೋಲನವನ್ನೇ ಸೃಷ್ಟಿಸಿದೆ. ನಗರ ಭಾಗ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಸಾಲಸೌಲಭ್ಯ ನೀಡುವ ಮೂಲಕ ಇತರೆ ಸಂಘಗಳಿಗೆ ಆದರ್ಶವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾತಂತ್ರ್ಯೂರ್ವದಲ್ಲಿ ಭಾರತ 22 ಜಿಡಿಪಿ ಹೊಂದಿತ್ತು. ಅದೇ 1948ರಲ್ಲಿ ಅದರ ಪ್ರಮಾಣ 3.25ಕ್ಕೆ ಕುಸಿದಿತ್ತು. ಇದಕ್ಕೆ ಕಾರಣ, ಕೈಗಾರಿಕರಣಕ್ಕೆ ನೀಡಲಾದ ಅತಿಯಾದ ಒತ್ತು. ಕೈಗಾರಿಕರಣದ ಮಧ್ಯೆ ಕೃಷಿ ವಲಯ ಪೂರ್ಣ ನಿರ್ಲಕ್ಷ್ಯ್ಕಡಾಡಗಿದೆ. ಈ ಹಿಂದೆ ಕೃಷಿ ಚಟುವಟಿಕೆಯಿಂದಲೇ ಶೇ.50ರಷ್ಟು ಜಿಡಿಪಿ ಬರುತಿತ್ತು. 2018ರಲ್ಲಿ ಇದರ ಪ್ರಮಾಣ 15.5ಕ್ಕೆ ಕುಸಿದಿದೆ. ಹೀಗಾಗಿ, ಕೃಷಿ ಬಗ್ಗೆ ಕಾಳಜಿ ಇರುವ ಅದನ್ನು ಪ್ರೀತಿಸುವ ವ್ಯಕ್ತಿ ಅಧಿಕಾರಕ್ಕೆ ಬಂದರೆ ಖಂಡಿತ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತದೆ ಎಂದರು.

ಸಂಘದ ಅಧ್ಯಕ್ಷ ಕೆ.ಎನ್.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಎಸ್​ಎಸ್​ಎಲ್​ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕಿ ಶಾರಾದಾ ಪೂರ್ಯಾನಾಯ್ಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ತೀರ್ಥಹಳ್ಳಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ವಿಜಯದೇವ್, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಲ ನಿರ್ದೇಶಕ ವಿ.ರಾಜು, ರಾಜ್ಯ ಒಕ್ಕಲಿಗ ಸಂಘದ ಸದಸ್ಯ ಡಿ.ವಿ.ರಮೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಎನ್​ಇಎಸ್ ಅಧ್ಯಕ್ಷ ಎ.ಎಸ್.ವಿಶ್ವನಾಥ್, ಮೇಯರ್ ನಾಗರಾಜ್ ಕಂಕಾರಿ ಉಪಸ್ಥಿತರಿದ್ದರು.

 

***

Note from Kannada.Club : This story has been auto-generated from a syndicated feed from http://vijayavani.net/government-co-operative-society-hd-deve-gowda-hd-kumaraswamy/