ಷೇರುಪೇಟೆ: ನಿನ್ನೆ ಮೂರು ಲಕ್ಷ ಕೋಟಿ ಲಾಭ, ಅಷ್ಟೇ ಪ್ರಮಾಣದಲ್ಲಿ ಇಂದು ನಷ್ಟ…!

ದೆಹಲಿ: ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರುಪೇಟೆ ಗುರುವಾರ ಸಾವಿರ ಅಂಕ ಸೆನ್ಸೆಕ್ಸ್‌ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ.

ಬಿಎಸ್​ಇ ಸೆನ್ಸೆಕ್ಸ್ ಇಂದು ಬೆಳಗ್ಗೆ 1 ಸಾವಿರಕ್ಕೂ ಹೆಚ್ಚು ಅಂಕಗಳಷ್ಟು ನಷ್ಟ ಅನುಭವಿಸಿ ಒಟ್ಟಾರೆ 34 ಸಾವಿರ ಅಂಕಗಳ ಗಡಿಗಿಂತ ಕೆಳಕ್ಕೆ ಇಳಿದಿದೆ. ಜಾಗತಿಕವಾಗಿ ವಿವಿಧ ಷೇರುಪೇಟೆಗಳು ಕುಸಿಯುತ್ತಿರುವುದು ಭಾರತದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಒಂದು ಅಂದಾಜಿನ ಪ್ರಕಾರ ಸೆನ್ಸೆಕ್ಸ್​ನಲ್ಲಿ ಹೂಡಿಕೆದಾರರು 3 ಲಕ್ಷ ಕೋಟಿ ರೂ ನಷ್ಟ ಅನುಭವಿಸಿರುವುದು ತಿಳಿದುಬಂದಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳವು 135.6 ಲಕ್ಷ ಕೋಟಿಗೆ ಕುಸಿತ ಕಂಡಿದೆ. ನಿನ್ನೆ ತುಸು ಚೇತರಿಸಿಕೊಂಡಿದ್ದ ಸೆನ್ಸೆಕ್ಸ್ ಸೂಚ್ಯಂಕ ಇಂದು 1,037.36 ಪಾಯಿಂಟ್​ಗಳಷ್ಟು ಇಳಿಕೆಯಾಗಿ 33,723.53ಕ್ಕೆ ಕುಸಿದಿದೆ.

ಈ ಮೊದಲು ಆಂತರಿಕ ಬೆಳವಣಿಗೆಗಳು ಸೆನ್ಸೆಕ್ಸ್ ಮೇಲೆ ಪರಿಣಾಮ ಬೀರುತ್ತಿತ್ತಾದರೂ ಇವತ್ತಿನ ಷೇರುಪೇಟೆಯ ರಕ್ತಪಾತಕ್ಕೆ ಜಾಗತಿಕ ಕಾರಣಗಳಿವೆ. ಜಪಾನ್​ನ ನಿಕ್ಕೀ ಮೊದಲಾದ ಜಾಗತಿಕ ಸೂಚ್ಯಂಕಗಳೂ ಇವತ್ತು ಕುಸಿದಿವೆ. ಇದು ಭಾರತೀಯ ಹೂಡಿಕೆದಾರರ ಮೆಲೆ ಪರಿಣಾಮ ಬಿದ್ದು ಇಲ್ಲಿಯ ಷೇರುಪೇಟೆಯನ್ನು ನಡುಗಿಸಿದೆ.

ಇದೇ ವೇಳೆ, ಡಾಲರ್ ಎದುರು ರೂಪಾಯಿ ಮೌಲ್ಯ ಪ್ರಪಾತಕ್ಕಿಳಿಯುವುದು ಮುಂದುವರಿದಿದೆ. ಇವತ್ತು 24 ಪೈಸೆಯಷ್ಟು ಕುಸಿತವಾಗಿದೆ. ಫೋರೆಕ್ಸ್ ಮಾರುಕಟ್ಟೆಯಲ್ಲಿ ಪ್ರತೀ ಡಾಲರ್​ಗೆ 74.45 ರೂಪಾಯಿಯಂತೆ ವಹಿವಾಟು ಆಗುತ್ತಿದೆ.

The post ಷೇರುಪೇಟೆ: ನಿನ್ನೆ ಮೂರು ಲಕ್ಷ ಕೋಟಿ ಲಾಭ, ಅಷ್ಟೇ ಪ್ರಮಾಣದಲ್ಲಿ ಇಂದು ನಷ್ಟ…! appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/stock-market-crash-erodes-over-rs-3-lakh-crore/