’ಲವ್ ಸೋನಿಯಾ’ದಲ್ಲಿ ರಿಚಾ ಚಡ್ಡಾ ಲೈಂಗಿಕ ಕಾರ್ಯಕರ್ತೆ

ದಕ್ಷಿಣ ಭಾರತದ ಸೆಕ್ಸ್ ಬಾಂಬ್ ಎಂದೇ ಹೆಸರಾಗಿದ್ದ ಮಲೆಯಾಳಂನ ಶಕೀಲಾ ಕುರಿತ ಜೀವನ ಚರಿತ್ರೆಯ ಚಿತ್ರ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಸದ್ದುಗದ್ದಲವಿಲ್ಲದೆ ಬಾಲಿವುಡ್ ನಟಿ ರೀಟಾ ಚೆಡ್ಡಾ ಲೈಂಗಿಕ ಕಾರ್ಯಕರ್ತೆಯ ಪಾತ್ರ ಮಾಡಿದ್ದು, ವೇಶ್ಯಾಗೃಹದಲ್ಲಿ ಸಿಲುಕಿದ ಹೆಂಗಸರ ಬದುಕಿಗೆ ಕನ್ನಡಿ ಹಿಡಿಯುವ ಪಾತ್ರದಲ್ಲಿ ’ಲವ್ ಸೋನಿಯಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಸೆಕ್ಸ್ ಬಾಂಬ್ ಶಕೀಲಾ ಜೀವನ ಕುರಿತ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ರಿಚಾ ಚಡ್ಡಾ,ಈ ಚಿತ್ರಕ್ಕೂ ಮುನ್ನ ಬಾಲಿವುಡ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

’ಲವ್ ಸೋನಿಯಾ’ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರ ಮಾಡುವಂತೆ ನಿರ್ದೇಶಕ ತರ್ಬೇಜ್ ನೂರಾನಿ,ಮೊದಲು ಕೇಳುತ್ತಿದ್ದಂತೆ ಒಲ್ಲೆ ಎಂದಿದ್ದ ರಿಚಾ ಮತ್ತೆ ಕಥೆ ಕೇಳಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.
ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುವ ಅಗತ್ಯತೆಯಿಂದ ಲೈಂಗಿಕ ಕಾರ್ಯಕರ್ತೆಯರನ್ನು ಭೇಟಿ ಮಾಡಿ ರಿಚಾ ಚಿತ್ರಕ್ಕೆ ಅಗತ್ಯವಾದ ಸಲಹೆ ಸೂಚನೆ ಪಡೆದಿದ್ಧಾರೆ. ಚಿತ್ರೀಕರಣದ ಸಂದರ್ಭದಲ್ಲಿ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಅವರಿಂದ ಅನೇಕ ಸಲಹೆ ಪಡೆದಿದ್ದಾರೆ.
ವೇಶ್ಯಾಗೃಹದಲ್ಲಿ ಸಿಲುಕಿದ ಹುಡುಗಿಯೊಬ್ಬಳ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ. ಈ ಚಿತ್ರದಲ್ಲಿ ರಿಚಾ ಚಡ್ಡಾ ಅವರೊಂದಿಗೆ ಮನೋಜ್ ಬಾಜ್‌ಪೇಯಿ, ಅನುಪಮ್ ಖೇರ್, ಫ್ರೀಡಾ ಪಿಂಟೋ, ಮೃಣಾಲ್ ಠಾಕೂರು, ರಾಜ್‌ಕುಮಾರ್ ರಾವ್ ಸೇರಿದಂತೆ ಬಹುತಾರಾಗಣ ಚಿತ್ರದಲ್ಲಿದೆ.
’ಲವ್ ಸೋನಿಯಾ” ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ. ಈ ನಡುವೆಯೇ ಚಿತ್ರ ಭಾರತೀಯ ಚಲನಚಿತ್ರೋತ್ಸವ, ಲಂಡನ್ ಚಿತ್ರೋತ್ಸವ ಸೇರಿದಂತೆ ವಿವಿಧ ಭಾಷೆಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿರುವುದು ಚಿತ್ರಕ್ಕೆ ಸಿಕ್ಕ ಮೊದಲ ಯಶಸ್ಸು ಇದಾಗಿದೆ.
ಇತ್ತೀಚೆಗಷ್ಠೇ ಬಾಲಿವುಡ್ ಮಂದಿಗಾಗಿ ಚಿತ್ರದ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ನೀಲಿ ಚಿತ್ರಗಳ ಮೂಲಕ ಗಮನ ಸೆಳೆದು ಬಾಲಿವುಡ್ ಚಿತ್ರರಂಗದಲ್ಲಿ ಬೇರು ಬಿಟ್ಟಿರುವ ಸನ್ನಿ ಲಿಯೋನ್ ಸೇರಿದಂತೆ ಗಣ್ಯಾತಿ ಗಣ್ಯರು ಚಿತ್ರ ಪ್ರದರ್ಶನಕ್ಕೆ ಆಗಮಿಸಿ ಚಿತ್ರಕ್ಕೆ ಮತ್ತು ರಿಚಾ ಪಾತ್ರಕ್ಕೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
ಚಿತ್ರದ ಕಥೆ ಕೇಳಿದಾಗ ನನ್ನಿಂದ ಪಾತ್ರ ಮಾಡಲು ಆಗುವುದಿಲ್ಲ ಎಂದು ತಿರಸ್ಕರಿಸಿದ್ದೆ. ಆ ನಂತರ ನಿರ್ದೇಶಕರು ಹೇಳಿದ ಕಥೆ ಮನಮುಟ್ಟಿತು. ವೇಶ್ಯಾಗೃಹದಲ್ಲಿ ಸಿಲುಕಿದ ಮಹಿಳೆಯ ಬದುಕಿನ ಚಿತ್ರಣವನ್ನು ತೆರೆದಿಡುವ ಪಾತ್ರ ನನ್ನ ಅಭಿನಯಕ್ಕೂ ಸವಾಲಾಗಿತ್ತು. ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಮತ್ತು ಪಾತ್ರಕ್ಕಾಗಿ ಅಗತ್ಯ ಸಿದ್ದತೆಯನ್ನೂ ಮಾಡಿಕೊಂಡಿದ್ದೇನೆ.
ಚಿತ್ರದಲ್ಲಿ ನಟಿಸುವಾಗ ಭಾವನಾತ್ಮಕ ಸನ್ನಿವೇಶಗಳ ಪರಿಚಯವಾಗಿದೆ. ಚಿತ್ರ ಎಂತವರ ಕಣ್ಣಲ್ಲೂ ನೀರು ತರಿಸಲಿದೆ ಎಂದು ಹೇಳಿಕೊಂಡಿದ್ದಾರೆ ರಿಚಾ ಚೆಡ್ಡಾ.

 

FacebookGoogle+WhatsAppGoogle GmailShare

***

Note from Kannada.Club : This story has been auto-generated from a syndicated feed from http://sanjevani.com/sanjevani/%e0%b2%b2%e0%b2%b5%e0%b3%8d-%e0%b2%b8%e0%b3%8b%e0%b2%a8%e0%b2%bf%e0%b2%af%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%bf%e0%b2%9a%e0%b2%be-%e0%b2%9a/