ರಾಹುಲ್​ ಗಾಂಧಿ ಕಾರ್ಯಕ್ರಮಕ್ಕೆ ಎಚ್​ಎಎಲ್​ ಸ್ಥಳ ನಿರಾಕರಣೆ

ಬೆಂಗಳೂರು: ರಾಹುಲ್​ ಗಾಂಧಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದ್ದ ಸಂವಾದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಲು ಎಚ್​ಎಎಲ್​ಅನುಮತಿ ನಿರಾಕರಿಸಿದೆ.

ಅ.13ರಂದು ನಡೆಯಬೇಕಿದ್ದ ಸಂವಾದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಬೆನ್ನಲ್ಲೇ, ಕೆಪಿಸಿಸಿ ಬೇರೆ ಸ್ಥಳಕ್ಕೆ ಹುಡುಕಾಟ ನಡೆಸಿದೆ.

ಎಚ್​ಎಎಲ್​ ಆವರಣದಲ್ಲಿ ಎಚ್​ಎಎಲ್​ ನೌಕರರರೊಂದಿಗೆ ನಡೆಯಬೇಕಿದ್ದ ಸಂವಾದ ಕಾರ್ಯಕ್ರಮ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಿರುವ ಮಿನ್ಸ್‌ ಸ್ಕ್ವೇರ್‌ ಬಳಿಯಿರುವ ವಿಮಾನ ಪ್ರತಿಮೆ ಪಕ್ಕದಲ್ಲಿ ಆಯೋಜಿಸಲು ಚಿಂತನೆ ನಡೆಸಿದೆ. ಈ ಕುರಿತು ಕೆಪಿಸಿಸಿ ಪೊಲೀಸರ ಬಳಿ ಅನುಮತಿ ಕೋರಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)

***

Note from Kannada.Club : This story has been auto-generated from a syndicated feed from http://vijayavani.net/rahul-gandhi-aicc-president-conference-hal-refused/