ಯಾತ್ರೆಗೆ ತೆರಳಲು ರು. 1 ಲಕ್ಷ ನೀಡಿದ ಜಮೀರ್‌‌

ಮಂಗಳೂರು: ಕೊಡಗಿನಲ್ಲಿ ಉಂಟಾದ ನೆರೆ ಸಂದರ್ಭ ಜೋಡುಪಾಲದಲ್ಲಿ ಸುಮಾರು 200 ಮಂದಿಯ ಪ್ರಾಣ ರಕ್ಷಣೆ ಮಾಡಿದ ತಂಡದಲ್ಲಿದ್ದ ನಾಲ್ವರು ಯುವಕರಿಗೆ ತೀರ್ಥಕ್ಷೇತ್ರ ತೆರಳಲು ಸಚಿವ ಜಮೀರ್ ಅಹಮದ್ 1 ಲಕ್ಷ ರು. ನೀಡಿದರು.

ತಂಡದಲ್ಲಿದ್ದ 16 ಮಂದಿ ಮುಸ್ಲಿಂ ಯುವಕರಿಗೆ ಸಚಿವ ಜಮೀರ್ ಅಹಮದ್ ಮಡಿಕೇರಿಗೆ ಭೇಟಿ ನೀಡಿದ್ದ ಸಂದರ್ಭ ಉಮ್ರಾ ಯಾತ್ರೆಯ ತೆರಳಲು ನೆರವಿನ ಭರವಸೆ ನೀಡಿದ್ದರು. ಇದೀಗ ಉಳಿದ ನಾಲ್ವರು ಹಿಂದೂ ಯುವಕರಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಧನ ಸಹಾಯ ಮಾಡಿ ಸಚಿವರು ಹೃದಯ ವೈಶಾಲ್ಯತೆ ಮೆರೆದರು.

ಕುಡುಪು ಬಳಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಜಾಗದಲ್ಲಿ ಕಾನೂನು ಮಾಪನ ಇಲಾಖಾ ಕಚೇರಿಗಳ ಸಂಕೀರ್ಣದ ಮಾಪನ ಭವನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಂದು ಲಕ್ಷ ರುಪಾಯಿ ಧನ ಸಹಾಯ ನೀಡಿದರು.

The post ಯಾತ್ರೆಗೆ ತೆರಳಲು ರು. 1 ಲಕ್ಷ ನೀಡಿದ ಜಮೀರ್‌‌ appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/zamir-gave-rs-1-lakh-for-yaatra/