”ಮೀ ಟೂ” ಗೆ ಐಶ್ ಬೆಂಬಲ ನಟಿಯರ ನೋವಿಗೆ ಸ್ಪಂದನೆ

ಇತ್ತೀಚೆಗೆ ಬಾಲಿವುಡ್ ಸೇರಿದಂತೆ, ಹಲವು ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ಕಿರುಕುಳ ವಿಷಯ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ದಶಕದ ಹಿಂದೆ ಬಾಲಿವುಡ್ ನಟ ನಾನಾ ಪಾಟೇಕರ್, ನಟಿ ತನುಶ್ರೀ ದತ್ತಾ ಅವರಿಗೆ ಕಿರುಕುಳ ನೀಡಿದ್ದಾರೆ ಎನ್ನುವ ವಿಷಯ ದೇಶದಲ್ಲಿ ಅದರಲ್ಲೂ, ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಇತ್ತೀಚೆಗೆ ನಟಿಯರು ತಮ್ಮ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳನ್ನು ಬಹಿರಂಗಗೊಳಿಸಲು ಮತ್ತು ಈ ರೀತಿಯ ದೌರ್ಜನ್ಯಕ್ಕೆ ಒಳಗಾದವರ ನೋವುಗಳಿಗೆ ಸ್ಪಂದಿಸಲು, ನಟಿಯರು ಸೇರಿಕೊಂಡು ”ಮೀ ಟೂ” ಅಭಿಯಾನ ಆರಂಭಿಸಿದ್ದು, ಅದಕ್ಕೆ ಬಾಲಿವುಡ್ ಸೇರಿದಂತೆ, ವಿವಿಧ ಭಾಷೆಯ ಚಿತ್ರರಂಗದಲ್ಲಿ ವ್ಯಾಪಕ ಬೆಂಬಲ ಸಿಗುತ್ತಿದೆ.
ಇತ್ತೀಚೆಗೆ ಅನುಷ್ಕ ಶರ್ಮ ಸೇರಿದಂತೆ, ಹಲವು ನಟಿಯರು ”ಮೀ ಟೂ” ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಇದೀಗ ಬಾಲಿವುಡ್ ಬೆಡಗಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅಭಿಯಾನಕ್ಕೆ ಬೆಂಬಲ ಸೂಚಿಸಿ, ನಿಮ್ಮೊಂದಿಗೆ ನಾನೂ ಇದ್ದೇನೆ, ನಿಮ್ಮ ನೋವಿಗೆ ಸ್ಪಂದಿಸುತ್ತೇನೆ ಎನ್ನುವ ಮೂಲಕ ಲೈಂಗಿಕ ಕಿರುಕುಳಕ್ಕೆ ಒಳಗಾದ ನಟಿಯರ ನೆರವಿಗೆ ಮುಂದಾಗಿದ್ದಾರೆ.
ನಟಿಯರು ತಮ್ಮ ಮೇಲಾಗುತ್ತಿರುವ ಈ ರೀತಿಯ ದೌರ್ಜನ್ಯಗಳನ್ನು ಬಚ್ಚಿಡದೆ ಅದನ್ನು ಎಲ್ಲರೆದುರು ತೆರೆದಿಟ್ಟರೆ, ಮುಂದೆ ದೌರ್ಜನ್ಯಕ್ಕೊಳಗಾಗುವುದು ತಪ್ಪಲಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಬೇಕು. ನೋವಿಗೆ ಒಳಗಾಗಿರುವ ಎಲ್ಲರೊಂದಿಗೆ ನಾನಿರಲಿದ್ದೇನೆ. ಅದೇ ರೀತಿ ನನ್ನೊಂದಿಗೆ ಹಲವು ನಟಿಯರು ಕೈಜೋಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಬಾಕ್ಸ್
ಈ ನಡುವೆ ನಾನಾ ಪಾಟೇಕರ್ ಮತ್ತು ತನುಶ್ರೀ ದತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ನಾನಾ ಪಾಟೇಕರ್ ಅವರಿಗೆ ನೋಟೀಸ್ ಜಾರಿ ಮಾಡಿ ಈ ಸಂಬಂಧ ತನಿಖೆಗೆ ಸಹಕರಿಸಬೇಕು. ಅಲ್ಲದೆ, 10 ದಿನಗಳ ಒಳಗಾಗಿ ಉತ್ತರ ನೀಡುವಂತೆಯೂ ಸೂಚಿಸಿದೆ.
ಅಲ್ಲದೆ, ನಿರ್ದೇಶಕ ರಾಕೇಶ್ ಸರಂಗ್, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರಿಗೂ ನೋಟೀಸ್ ಜಾರಿ ಮಾಡಲಾಗಿದೆ.

FacebookGoogle+WhatsAppGoogle GmailShare

***

Note from Kannada.Club : This story has been auto-generated from a syndicated feed from http://sanjevani.com/sanjevani/%e0%b2%ae%e0%b3%80-%e0%b2%9f%e0%b3%82-%e0%b2%97%e0%b3%86-%e0%b2%90%e0%b2%b6%e0%b3%8d-%e0%b2%ac%e0%b3%86%e0%b2%82%e0%b2%ac%e0%b2%b2-%e0%b2%a8%e0%b2%9f%e0%b2%bf%e0%b2%af%e0%b2%b0-%e0%b2%a8/