ಮಹೇಶ್‌ ರಾಜೀನಾಮೆ ವಿಚಾರವಾಗಿ ಎಲ್ಲವನ್ನೂ ಬಹಿರಂಗವಾಗಿ ಹೇಳೋಕಾಗಲ್ಲ ಎಂದ್ರು ಸಿಎಂ

ಬೆಂಗಳೂರು: ರಾಜ್ಯದ ಏಕೈಕ ಬಿಎಸ್‌ಪಿ ಪಕ್ಷದ ಶಾಸಕ ಎನ್‌ ಮಹೇಶ್‌ ಸಮ್ಮಿಶ್ರ ಸರ್ಕಾರದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ಸಂಘಟನೆ ದೃಷ್ಟಿಯಿಂದ ಮಹೇಶ್‌ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಯಾವತಿ ಸೂಚನೆಯಂತೆ ರಾಜೀನಾಮೆ ಕೊಟ್ಟಿರಬಹುದು. ಎಲ್ಲ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ. ಊಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ ಎಂದು ಹೇಳಿದರು.

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಬಿಎಸ್​​ಪಿ ಪಕ್ಷದಲ್ಲಿ ನಡೆದ ಆತಂರಿಕ ಘಟನೆ ಬಗ್ಗೆ ಹೇಳೋಕೆ ಆಗಲ್ಲ. ಪಕ್ಷ ಸಂಘಟನೆಗೆ ಸಾಧ್ಯವಾಗ್ತಿಲ್ಲ ಎಂದು ರಾಜೀನಾಮೆ ನೀಡಿರಬಹುದು. ನನ್ನ ಜತೆಯಲ್ಲಿ ಬಿಎಸ್​​​ಪಿ ನಾಯಕರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

***

Note from Kannada.Club : This story has been auto-generated from a syndicated feed from http://vijayavani.net/n-mahesh-resignation-hd-kumaraswamy-bangalore-coalition-government/