ಮಹಿಳಾ ಪ್ರಕರಣಗಳು ರಾಜಕೀಯ ಪ್ರಕರಣಗಳಾಗಬಾರದು-ಹೇಮಲತಾ ಮಹಿಷಿ

ಹೊಸಪೇಟೆ.ಮಾ.9 ಮಹಿಳೆಯರ ಪ್ರಕರಣಗಳು ಧರ್ಮದ ಅಥವಾ ರಾಜಕೀಯ ಪ್ರಕರಣಗಳಾಗದೆ, ಮಹಿಳಾ ಪ್ರಕರಣಗಳಾಗಿಯೇ ಮುಂದುವರಿದಾಗ ಮಾತ್ರ ಮಹಿಳೆಯರ ಚಳುವಳಿಗೆ ಅರ್ಥ ಬರುತ್ತದೆ ಎಂದು ಹಿರಿಯ ನ್ಯಾಯವಾದಿ ಹೇಮಲತಾ ಮಹಿಷಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಗುರುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜರುಗಿದ “ಮಹಿಳಾ ಚಳುವಳಿಯ ಇತ್ತಿಚೀನ ಬೆಳವಣಿಗೆಗಳು” ಎಂಬ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಶೇ.30 ರಷ್ಟು ಮೀಸಲಾತಿ ಜಾರಿಗೆ ಬಂದಾಗ ಮಹಿಳೆಯರಲ್ಲಿಯೇ ಭಿನ್ನಮತ ಉಂಟು ಮಾಡಲು ಒಳ ಮೀಸಲಾತಿ ಜಾರಿಗೆ ಬರಬೇಕೆಂದು ಪುರುಷ ರಾಜಕಾರಣಿಗಳು ಒತ್ತಾಯಿಸಿದ್ದರು.ಇನ್ನು ಸ್ವಾತಂತ್ರ ಮತ್ತು ಸಮಾನತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

ಇದಕ್ಕೂ ಮೊದಲು ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಿಂದ ಆಯೋಜಿಸಿದ ಚಿತ್ರಕಲಾ ಪ್ರದರ್ಶನವನ್ನು ಅವರು ಉದ್ಘಾಟಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿಮಾತನಾಡಿದ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ, ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಬೇಕು, ಲಿಂಗ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಬೇಕಾಗಿದೆ. ಸಮಾನತೆ ಎಂಬುವುದು ವ್ಯಕ್ತಿಗತ ನೆಲೆಯಿಂದ ಬರಬೇಕೆ ಹೊರತು ಇನ್ಯಾವುದೇ ಚಳುವಳಿ ಮೂಲಕವಲ್ಲ, ಸಾಮಾಜಿಕ ಕಟ್ಟುಪಾಡುಗಳಿಂದ ಮಹಿಳೆಯರನ್ನು ಸ್ವತಂತ್ರಗೊಳಿಸಿ ಅವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಶೈಲಜಾ ಹಿರೇಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಡಿ.ಪಾಂಡುರಂಗ ಬಾಬು, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಆಡಳಿತ ವರ್ಗ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

FacebookGoogle+WhatsAppGoogle GmailShare

***

Note from Kannada.Club : This story has been auto-generated from a syndicated feed from http://sanjevani.com/sanjevani/%e0%b2%ae%e0%b2%b9%e0%b2%bf%e0%b2%b3%e0%b2%be-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3%e0%b2%97%e0%b2%b3%e0%b3%81-%e0%b2%b0%e0%b2%be%e0%b2%9c%e0%b2%95%e0%b3%80%e0%b2%af-%e0%b2%aa/