ಮಕ್ಕಳಾಗುತ್ತವೆ ಎಂಬ ತಾಂತ್ರಿಕನ ಮಾತು ಕೇಳಿ ಅತ್ತಿಗೆಯನ್ನೇ ಬಲಿಕೊಟ್ಟರು!

ಸೀತಾಮರಿ(ಬಿಹಾರ): ಆಘಾತಕಾರಿ ಬೆಳವಣಿಗೆಯೊಂದರಲ್ಲಿ ತಾಂತ್ರಿಕನ ಮಾತು ಕೇಳಿ ಅತ್ತಿಗೆಯನ್ನು ಮಾಟಗಾತಿ ಎಂದು ನಂಬಿ ಸಹೋದರರೇ ಬಲಿ ಕೊಟ್ಟಿದ್ದಾರೆ.

ಬಿಹಾರದ ಸೀತಾಮರಿಯಲ್ಲಿ ಘಟನೆ ನಡೆದಿದ್ದು, 36 ವರ್ಷದ ಸರಿತಾ ದೇವಿ ಎಂಬಾಕೆಯನ್ನು ಶಿಯೋಹರ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬಲಿ ಕೊಡಲಾಗಿದೆ ಎಂದು ಡಿವೈಎಸ್‌ಪಿ ವೀರ್‌ ಧೀರೇಂದ್ರ ತಿಳಿಸಿದ್ದಾರೆ.

ಭಗವಾನ್‌ ಲಾಲ್‌ ಮುಖಿಯಾ ಎಂಬಾತನನ್ನು ಸರಿತಾ ಮದುವೆಯಾಗಿದ್ದರು. ಭಗವಾನ್‌ ಅವರ ಕಿರಿಯ ಸಹೋದರರಾದ ಸುನಿಲ್ ಮುಖಿಯಾ, ವೀರ್ ಮುಖಿಯಾ ಮತ್ತು ಆತನ ಹೆಂಡತಿ ಇಂದಿರಾಸನ್ ದೇವಿ ಎಂಬವರು ಅಪರಾಧದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಿಚಾರಣೆ ನಡೆಸಿದಾಗ ಅಪರಾಧವನ್ನು ಒಪ್ಪಿಕೊಂಡಿದ್ದು, ವೀರ್‌ ಮುಖಿಯಾ ಮತ್ತು ಇಂದಿರಾಸನ್‌ ದೇವಿ ವಿವಾಹವಾಗಿ ಹಲವು ದಿನಗಳೇ ಕಳೆದಿದ್ದರೂ ಮಕ್ಕಳಾಗಿರಲಿಲ್ಲ. ಇದರಿಂದ ತಾಂತ್ರಿಕ್‌ನನ್ನು ಭೇಟಿ ಮಾಡಿದ್ದಾರೆ. ವಿನೋದ್‌ ಎಂಬ ತಾಂತ್ರಿಕ್‌ ಸರಿತಾ ದೇವಿಯು ಮಾಟಗಾತಿಯಾಗಿದ್ದಾಳೆ. ಹಾಗಾಗಿ ನಿಮಗೆ ಮಕ್ಕಳಾಗಿಲ್ಲ. ನಿಮಗೆ ಮಕ್ಕಳನ್ನು ದಯಪಾಲಿಸುವಂತೆ ದೇವರನ್ನು ಶಾಂತಗೊಳಿಸಲು ಆಕೆಯನ್ನು ಬಲಿಕೊಡಬೇಕು ಎಂದು ತಿಳಿಸಿದ್ದಾನೆ.

ತಾಂತ್ರಿಕ ವಿನೋದ್‌ ಮತ್ತು ಆತನ ಸಹಚರರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

***

Note from Kannada.Club : This story has been auto-generated from a syndicated feed from http://vijayavani.net/2-brothers-listening-to-tantric-kill-sister-in-law-in-bihar-police/