ಮಂಡ್ಯದಲ್ಲಿ ತೆನೆಗೆ ಕೈ ಕಾಟ? |

 

 

ಮಾದರಹಳ್ಳಿ ರಾಜು

ಮಂಡ್ಯ: ಜಿಲ್ಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಚುನಾವಣೆಗೂ ಮುನ್ನವೇ ವರಿಷ್ಠರ ನಿರ್ಲಕ್ಷ್ಯ್ಕೊಳಗಾದರೂ, ಕಮಲ ಕೆಲವೆಡೆ ಕಾಂಗ್ರೆಸ್-ಜೆಡಿಎಸ್​ಗೆ ಅಡ್ಡಗಾಲು ಹಾಕಲು ಸಜ್ಜಾಗಿದೆ. ಕಾಂಗ್ರೆಸ್ ಒಡಕಿನ ಲಾಭದಿಂದ ಪ್ರಾಬಲ್ಯ ಮೆರೆಯುತ್ತಿದ್ದ ಜೆಡಿಎಸ್​ಗೆ ಕೆಲಕಡೆ ಅದೇ ಪರಿಸ್ಥಿತಿ ನಿರ್ವಣವಾಗಿದೆ. ಸ್ವಪ್ರತಿಷ್ಠೆಯಿಂದ ಸೊರಗಿದ್ದ ‘ಕೈ’ ಚಲುವರಾಯಸ್ವಾಮಿ ಆಂಡ್ ಟೀಂನಿಂದ ಕೊಂಚ ಬಲಗೊಂಡಂತಿದೆ. ದಳ ಅಭ್ಯರ್ಥಿಗಳಿಗೆ ಕುಮಾರಸ್ವಾಮಿ ಸಿಎಂ ಆಗುತ್ತಾರೆಂಬ ಅಲೆಯೇ ಶ್ರೀರಕ್ಷೆಯಾಗಿದೆ. ಆದರೆ ಮಂಡ್ಯ ಮತ್ತು ಕೆ.ಆರ್.ಪೇಟೆಯಲ್ಲಿ ದಳ ಛಿದ್ರವಾಗಿದೆ. ಮಂಡ್ಯ ಟಿಕೆಟ್ ಬಯಸಿದ್ದ ಚಂದಗಾಲು ಶಿವಣ್ಣ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಡಾ.ಶಂಕರೇಗೌಡ ಪಕ್ಷೇತರವಾಗಿ ಕಣದಲ್ಲಿದ್ದಾರೆ. ಕೆ.ಆರ್.ಪೇಟೆಯಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ಹಾಲಿ ಶಾಸಕ ನಾರಾಯಣಗೌಡ ಸ್ವಂತ ಅಣ್ಣ ರಾಮಚಂದ್ರೇಗೌಡ ‘ಕೈ’ ಹಿಡಿದಿದ್ದಾರೆ. ಸಿ ಫಾರಂ ನಾಟಕದಿಂದ ಬೇಸತ್ತ ಜಿಪಂ ಸದಸ್ಯ ದೇವರಾಜು ತಟಸ್ಥರಾಗಿದ್ದಾರೆ. ಎರಡೂ ಪಕ್ಷಗಳಿಗೂ ಒಳೇಟಿನ ಭೀತಿ ಕಾಡುತ್ತಿದ್ದು, ಯಾರು ಯಾರ ಕಾಲೆಳೆಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

 

***

Note from Kannada.Club : This story has been auto-generated from a syndicated feed from http://vijayavani.net/%e0%b2%ae%e0%b2%82%e0%b2%a1%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b3%86%e0%b2%a8%e0%b3%86%e0%b2%97%e0%b3%86-%e0%b2%95%e0%b3%88-%e0%b2%95%e0%b2%be%e0%b2%9f/