ಬೆಳಗಾವಿ ರಾಜಕಾರಣಕ್ಕೆ ಬ್ರೇಕ್​ ಹಾಕಲು ಸಿಎಂ ಕುಮಾರಸ್ವಾಮಿ ರಣತಂತ್ರ

ಬೆಳಗಾವಿ: ಕುಂದಾನಗರದ ರಾಜಕಾರಣಕ್ಕೆ ತಡೆಹಾಕಲು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಹೊಸ ರಣತಂತ್ರವೊಂದನ್ನು ರೂಪಿಸಿದ್ದಾರೆ.

ಬಹುದಿನಗಳಿಂದ ರಾಜಕೀಯ ತಲೆನೋವಾಗಿರುವ ಬೆಳಗಾವಿ ರಾಜಕಾರಣದಿಂದ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ಬರುವ ಹಿನ್ನೆಲೆಯಲ್ಲಿ ಬೆಳಗಾವಿಯನ್ನು 3 ಭಾಗಗಳಾಗಿ ವಿಭಜಿಸಲು ಚಿಂತನೆ ನಡೆಸಲಾಗಿದೆ.

ಗೋಕಾಕ್ ಹಾಗೂ ಚಿಕ್ಕೋಡಿಯನ್ನು ಹೊಸ ಜಿಲ್ಲೆಗಳಾಗಿ ರಚನೆ ಮಾಡಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, 3 ಲೋಕಸಭಾ, 18 ವಿಧಾನಸಭಾ ಕ್ಷೇತ್ರ ಒಳಗೊಂಡ ಬೆಳಗಾವಿ ಜಿಲ್ಲೆ ವಿಭಜನೆ ಆದರೆ ರಾಜಕೀಯ ಸಮಸ್ಯೆಗೆ ಕಡಿವಾಣ ಬೀಳುವ ಸಾಧ್ಯತೆಯಿದೆ. (ದಿಗ್ವಿಜಯ ನ್ಯೂಸ್​)

***

Note from Kannada.Club : This story has been auto-generated from a syndicated feed from http://vijayavani.net/belagavi-politics-cm-hd-kumaraswamy-hdk-district-chikodi-gokak/