ಬಾಲಕರು ನೀರು ಪಾಲು

ಗುಂಡ್ಲುಪೇಟೆ: ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಈಜಲು ತೆರಳಿದ್ದ ಇಬ್ಬರು ಗೆಳೆಯರು ಮೃತಪಟ್ಟಿದ್ದಾರೆ.

ಚಂದನ್(17),ಪ್ರವೀಣ್(15) ಮೃತರು. ಕಬಿನಿ ನದಿ ಮೂಲದಿಂದ ಬರಿದಾಗಿದ್ದ ಕೆರೆಗೆ ಕೊಳಾಯಿ ಮಾರ್ಗವಾಗಿ ಕಳೆದ ತಿಂಗಳು ನೀರು ಬಿಟ್ಟಿದ್ದರಿಂದ ಕೆರೆ ಭರ್ತಿಯಾಗಿದ್ದು, ಬುಧುವಾರ ಮಧ್ಯಾಹ್ನ ಮನೆಯಿಂದ ಹೊರಟ ಈ ಇಬ್ಬರು ಸ್ನೇಹಿತರು ಸಂಜೆಯಾದರೂ ಮನೆಗೆ ಬಾರದ ಹಿನ್ನಲೆ ಇವರ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಹೊಸ ಕೆರೆ ಏರಿ ಮೇಲೆ ಬಾಲಕರ ಬಟ್ಟೆ, ಮೊಬೈಲ್, ಸೈಕಲ್ ಇದ್ದುದನ್ನು ಕಂಡು ಈಜಲು ಹೋಗಿ ತಿಳಿದುಬಂದಿದೆ. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಬಾಲಕರ ಮೃತದೇಹಗಳು ಪತ್ತೆಯಾಗಿವೆ.

The post ಬಾಲಕರು ನೀರು ಪಾಲು appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/boys-fell-in-the-water/