ಬಳ್ಳಾರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿ ವಿಜಯ ಭಾಸ್ಕರರೆಡ್ಡಿ

ಬಳ್ಳಾರಿ, ಫೆ.5: ಜಿಲ್ಲಾ ಲಾರಿ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಪಾರ್ವತಿ ರೋಡ್ ಲೈನ್ಸ್ ನ ಮಾಲೀಕ ವಿಜಯಭಾಸ್ಕರ ರೆಡ್ಡಿ ಆಯ್ಕೆಯಾಗಿದ್ದಾರೆ.

ನಗರದ ಲಾರಿ ತಂಗುದಾಣದಲ್ಲಿರುವ ಸಂಘದ ಕಛೇರಿ ಆವರಣದಲ್ಲಿ ಸಭೆ ನಡೆಸಿದ ಸಂಘದ ಸರ್ವ ಸದಸ್ಯರು ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.

ಅಧ್ಯಕ್ಷರಾಗಿ ವಿಜಯಭಾಸ್ಕರರೆಡ್ಡಿ, ಉಪಾಧ್ಯಕ್ಷರಾಗಿ ಓಬಳೇಶ ಮತ್ತು ಫಯಜ್, ಕಾರ್ಯದರ್ಶಿಯಾಗಿ ಕೆ.ಶಿವಶಂಕರರೆಡ್ಡಿ, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಚಂದ್ರಶೇಖರ್, ಉಪಕಾರ್ಯದರ್ಶಿಗಳಾಗಿ ಎಂ.ವಿಶ್ವನಾಥ, ಮುನ್ನ, ಖಜಾಂಚಿಯಾಗಿ ಬಿ.ನಾಗರಾಜ್ ಅವರನ್ನು ಆಯ್ಕೆ ಮಾಡಿದೆ ಎಂದು ಪ್ರಕಟಣೆಯಲ್ಲಿ ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

FacebookGoogle+WhatsAppGoogle GmailShare

***

Note from Kannada.Club : This story has been auto-generated from a syndicated feed from http://sanjevani.com/sanjevani/%e0%b2%ac%e0%b2%b3%e0%b3%8d%e0%b2%b3%e0%b2%be%e0%b2%b0%e0%b2%bf-%e0%b2%b2%e0%b2%be%e0%b2%b0%e0%b2%bf-%e0%b2%ae%e0%b2%be%e0%b2%b2%e0%b3%80%e0%b2%95%e0%b2%b0-%e0%b2%b8%e0%b2%82%e0%b2%98%e0%b2%a6/