ಪ್ರೇಯಸಿಯ ಮೇಲಿನ ಕೋಪಕ್ಕೆ ಆಕೆ ಕೊಟ್ಟ ನಾಯಿಯನ್ನೇ ಕೊಂದ ಪ್ರಿಯತಮ…!

ಕ್ಯಾಲಿಪೋರ್ನಿಯಾ: ತನ್ನ ಪ್ರೇಯಸಿ ಬ್ರೇಕ್‌ಅಪ್ ಮಾಡಿಕೊಂಡಳು ಎನ್ನುವ ಕೋಪಕ್ಕೆ ಆಕೆ ಉಡುಗೊರೆಯಾಗಿ ನೀಡಿದ್ದ ನಾಯಿಯನ್ನು ಯುವಕನೊಬ್ಬ ಕೊಂದ ಘಟನೆ  ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ.

24 ವರ್ಷದ ಪೀಕ್ ಎಂಬಾತ ತನ್ನ ಪ್ರೇಯಸಿಯೊಂದಿಗೆ ಜಗಳವಾಡಿ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೆ, ಆಕೆ ಉಡುಗೊರೆಯಾಗಿ ನೀಡಿದ್ದ ನಾಯಿ ಮಾತ್ರ ಈತನ ಬಳಿಯೇ ಇತ್ತು. ಕರೆ ಮಾಡಿ ನಾಯಿಯನ್ನು ತಗೆದುಕೊಂಡು ಹೋಗುವಂತೆ ಹೇಳಿದ್ದರೂ ಆಕೆ ಬಂದಿರಲಿಲ್ಲ.

ಒಂದು ದಿನ ಆ ನಾಯಿ ತಾನು ಸಾಕಿದ ನಾಯಿ ಮರಿಯ ಜತೆ ಕಿತ್ತಾಡಿಕೊಂಡಿದ್ದರಿಂದ, ಕೋಪಗೊಂಡ ಯುವಕ  ಆಕೆ ನೀಡಿದ್ದ ನಾಯಿಯನ್ನು ಜೀವಂತವಾಗಿ ಹೂತು ಹಾಕಿದ್ದಾನೆ. ನಾಯಿಯನ್ನು ತನ್ನ ಅಪಾರ್ಟ್ಮೆಂಟ್ ನಲ್ಲಿ ಹೂತ್ತಿಟ್ಟ ಬಗ್ಗೆ ಮಾಜಿ ಪ್ರೇಯಸಿಗೆ ಹೇಳಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಆದರೆ ಜಾಮೀನಿನ ಮೇಲೆ ಹೊರಬಂದಿರುವ ಈತನ ವಿರುದ್ಧ ಇದೀಗ ಪ್ರಾಣಿ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.

The post ಪ್ರೇಯಸಿಯ ಮೇಲಿನ ಕೋಪಕ್ಕೆ ಆಕೆ ಕೊಟ್ಟ ನಾಯಿಯನ್ನೇ ಕೊಂದ ಪ್ರಿಯತಮ…! appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/boy-killed-the-dog-revenge-his-ex-lover/