ಪೆಟ್ರೋಲ್, ಡೀಸೆಲ್ ಬೆಲೆ ಜಿಎಸ್ಟಿ ವ್ಯಾಪ್ತಿಗೆ ತರಲು ಇದು ಸಕಾಲ

ಎಲ್ಲ ಆರ್ಥಿಕ ಚಟುವಟಿಕೆಗಳ ಮೂಲ ಆಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಜಿಎಸ್ಟಿ ದರಗಳು ಅತಿ ಕಡಿಮೆ ಇರಬೇಕಾಗುತ್ತದೆ.

  • ಅಜಯ್ ಶಂಕರ್

ಜಿಎಸ್ಟಿ ತೆರಿಗೆ ಪದ್ಧತಿಯ ಕಷ್ಟದ ಸಮಯಗಳು ಈಗ ಮುಗಿದಂತೆ ಕಾಣುತ್ತಿವೆ. ಅತಿ ಹೆಚ್ಚಿನ ಶೇ 28ರ ಬಡ್ಡಿಯ ವ್ಯಾಪ್ತಿಗೆ ಒಳಪಡುವ ಅನೇಕ ವಸ್ತುಗಳನ್ನು ಹೊರತುಪಡಿಸಲಾಗಿದ್ದು, ಆದಾಯ ಸಂಗ್ರಹದ ಬಗ್ಗೆ ಇದ್ದ ಆತಂಕವೂ ನಿವಾರಣೆಯೂ ಆಗಿದೆ. ಈ ಸಂದರ್ಭದಲ್ಲಿ ವಿದ್ಯುತ್, ಪೆಟ್ರೋಲ್ ಮತ್ತು ಡೀಸೆಲಿಗೆ ಜಿಎಸ್ಟಿ ಅನ್ವಯಿಸುವುದು ಸುಲಭ ಸಾಧ್ಯವಾಗುತ್ತದೆ. ಹಳೆಯ ತೆರಿಗೆ ಪದ್ಧತಿಯಿಂದ ಜಿಎಸ್ಟಿ ಪದ್ಧತಿಗೆ ಪರಿವರ್ತನೆಯಾಗುವ ಮಹತ್ಕಾರ್ಯವನ್ನು ಸರ್ಕಾರ ಈಗ ಕೈಗೊಳ್ಳಬೇಕಿದೆ. ಏಕೆಂದರೆ ಇಂಧನ ಕ್ಷೇತ್ರ ಮೌಲ್ಯವರ್ಧಿತ ತೆರಿಗೆ ಸಂಗ್ರಹದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ವಿದ್ಯುತ್ ಕ್ಷೇತ್ರವನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಲು ಸಾಕಷ್ಟು ಕಾರಣಗಳಿವೆ. ಆರಂಭದ ಹಂತದಲ್ಲಿ ಈ ತೆರಿಗೆ ದರಗಳನ್ನು ನಿರ್ಧರಿಸುವುದೇ ಸವಾಲಿನ ಪ್ರಶ್ನೆಯಾಗಿದ್ದರಿಂದ ಮುಂದೂಡಲಾಗಿತ್ತು. ವಿದ್ಯುತ್ ಬಳಕೆಯ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಸಂವಿಧಾನಿಕವಾಗಿ ಪಡೆದಿವೆ. ಈ ಆದಾಯವನ್ನು ರಾಜ್ಯ ಸರ್ಕಾರಗಳು ವಿದ್ಯುತ್ ಬಳಕೆದಾರರಿಗೆ ನೀಡುವ ಸಹಾಯಧನವಾಗಿ ಬಳಸುತ್ತವೆ. ವಿದ್ಯುತ್ ಬಳಕೆಯ ಮೇಲೆ ಕೇಂದ್ರ ಅಬಕಾರಿ ಸುಂಕ ಹೇರಲಾಗುವುದಿಲ್ಲ.

ಹಾಗಾಗಿ ವಿದ್ಯುತ್ ಬಳಕೆಯನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರಗಳ ಸಹಮತ ಅಗತ್ಯ. ಇದು ಬಹುಶಃ ಕಡಿಮೆ ತೆರಿಗೆ ದರಕ್ಕೆ ಎಡೆಮಾಡಿಕೊಟ್ಟು ಹಾಲಿ ತೆರಿಗೆ ಮತ್ತು ಸುಂಕಗಳ ಕೊನೆಯಾಗಬಹುದು. ಇದರಿಂದ ರಾಜ್ಯಗಳಿಗೆ ಕಷ್ಟವಾಗಲಾರದು. ಸುಂಕ ಮತ್ತು ಇತರ ತೆರಿಗೆಗಳ ರದ್ದತಿಯಿಂದ ಉಂಟಾಗುವ ನಷ್ಟವನ್ನು ಜಿಎಸ್ಟಿ ಆದಾಯದ ಮೂಲಕ ಗಳಿಸಬಹುದು. ಆದರೆ ಕಷ್ಟ ಎದುರಾಗುವುದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ. ಹಿಂದೆ ಕಾರುಗಳನ್ನು ಹೊಂದಿದ್ದ ಶ್ರೀಮಂತರೇ ಹೆಚ್ಚು ಪೆಟ್ರೋಲ್ ಬಳಸುತ್ತಿದ್ದರಿಂದ ಪೆಟ್ರೋಲ್ ಮೇಲೆ ಹೆಚ್ಚಿನ ತೆರಿಗೆ ಹೇರುವುದು ಸಾಮಾನ್ಯವಾಗಿತ್ತು. ಹಾಗಾಗಿಯೇ ಇಂದಿಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪೆಟ್ರೋಲ್ ಮೇಲಿನ ತೆರಿಗೆಯೇ ಪ್ರಮುಖ ಆದಾಯವಾಗಿರುತ್ತದೆ. ಲಾರಿ, ಬಸ್ ಮತ್ತು ಟ್ರಾಕ್ಟರುಗಳಿಗೆ ಬಳಸಲಾಗುವ ಡೀಸೆಲ್ ಮೇಲೆ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ. ಮೂಲದಲ್ಲಿ ಎರಡೂ ತೈಲಗಳ ಬೆಲೆ ಒಂದೇ ಆಗಿರುತ್ತದೆ. ಆದರೆ ಡೀಸೆಲ್ ಬೆಲೆ ಕಡಿಮೆಯಾಗಿದ್ದರಿಂದ ಡೀಸೆಲ್ ಬಳಸುವ ಕಾರುಗಳ ಸಂಖ್ಯೆಯೂ ಹೆಚ್ಚಾಗತೊಡಗಿತ್ತು. ಈ ಬೆಲೆಯ ತಾರತಮ್ಯವನ್ನು ಹೋಗಲಾಡಿಸಿದ್ದು,  ಯುಪಿಎ ಸರ್ಕಾರದ ಸುಧಾರಣಾ ನೀತಿಗಳು ಯುಪಿಎ ಸರ್ಕಾರ ಡೀಸೆಲ್ ಬೆಲೆಗಳನ್ನು ಹಂತಹಂತವಾಗಿ ಏರಿಸಲಾರಂಭಿಸಿದ್ದು, ಇದೀಗ ಎರಡೂ ತೈಲಗಳ ಬೆಲೆ ಬಹುಪಾಲು ಒಂದೇ ಆಗಿದೆ.

ಎಲ್ಲ ಆರ್ಥಿಕ ಚಟುವಟಿಕೆಗಳ ಮೂಲ ಆಗಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಜಿಎಸ್ಟಿ ದರಗಳು ಅತಿ ಕಡಿಮೆ ಇರಬೇಕಾಗುತ್ತದೆ. ಈಗಿನಂತೆ ಹೆಚ್ಚಿನ ತೆರಿಗೆ ವಿಧಿಸಿದರೆ ಆರ್ಥಿಕ ಚಟುವಟಿಕೆಗಳು ಕುಂಠಿತವಾಗುತ್ತವೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕತೆ ಕುಸಿಯುತ್ತದೆ. ಹಾಗಾಗಿ ಈ ಎರಡೂ ಪದಾರ್ಥಗಳನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿ ಗರಿಷ್ಟ ತೆರಿಗೆ ದರ ವಿಧಿಸುವುದು ಸೂಕ್ತ. ಆದರೆ ಇದರಿಂದ ಉಂಟಾಗುವ ಆದಾಯದ ಕೊರತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಮನಾಗಿ ಭಾಧಿಸುತ್ತದೆ. ಉದಾಹರಣೆಗೆ ಪೆಟ್ರೋಲಿಗೆ ಜಿಎಸ್ಟಿಯ ಗರಿಷ್ಠ ದರ ವಿಧಿಸಿದರೆ ಪೆಟ್ರೋಲ್ ಗ್ರಾಹರಿಗೆ ಲೀಟರಿಗೆ 50 ರೂಪಾಯಿಗೆ ದೊರೆಯುತ್ತದೆ. ಈಗಿನ ಬೆಲೆಗಿಂತಲೂ 30 ರೂ ಕಡಿಮೆ. ಇದರಿಂದ ಉಂಟಾಗುವ ಆದಾಯದ ವ್ಯತ್ಯಯವನ್ನು ಭರಿಸಲಾಗುವುದಿಲ್ಲ. ಹಾಗಾಗಿಯೇ ಸರ್ಕಾರಗಳೂ ಸಹ ಜಿಎಸ್ಟಿ ಅನ್ವಯಿಸಲು ಹಿಂಜರಿಯುತ್ತಿವೆ. ಆದರೆ ಕ್ರಿಯಾಶೀಲ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು. ಇದು ಎಂದಾದರೂ ಸಾಧ್ಯವಿದೆ ಎಂದಾದಲ್ಲಿ ಇಂದು ಸನ್ನಿವೇಶ ಹೆಚ್ಚು ಪೂರಕವಾಗಿದೆ.

***

Note from Kannada.Club : This story has been auto-generated from a syndicated feed from http://karavaliale.net/it-is-time-to-put-petrol-and-diesel-prices-under-gst/