ನವಿಲುಗಳ ಅಸಹಜ ಸಾವು

ಇಂಡಿ: ತಾಲೂಕಿನ ಲಚ್ಯಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಸಹಜವಾಗಿ ನವಿಲುಗಳು ಸಾಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಲಚ್ಯಾಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ರಾಷ್ಟ್ರೀಯ ಪಕ್ಷಿ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ಕೆಲ ದಿನಗಳಿಂದ ಒಮ್ಮಿಂದೊಮ್ಮೆಲೆ ನವಿಲುಗಳು ಸಾಯುತ್ತಿರುವುದು ತಿಳಿದು ಬಂದಿದೆ.

ನವಿಲುಗಳು ತಿರುಗಾಡುವ ಸ್ಥಳದಲ್ಲಿ ವಿಷಪೂರಿತ ಕಾಳುಗಳನ್ನು ಹಾಕಿ, ಅವು ಸಾಯುವಂತೆ ಮಾಡಿ, ಅವುಗಳನ್ನು ತಿನ್ನಲು ಕೊಲ್ಲುತ್ತಿರಬಹುದು ಎಂದು ಹೆಸರು ಹೇಳಲಿಚ್ಛಿಸದ ಜನ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದಕ್ಕೂ ಸಂಬಂಧಪಟ್ಟ ಇಲಾಖೆಯವರು ನವಿಲುಗಳ ರಕ್ಷಣೆಗೆ ಮುಂದಾಗಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

 

***

Note from Kannada.Club : This story has been auto-generated from a syndicated feed from http://vijayavani.net/lachyan-peacock-indi-national-bird-death/