ನಂಜುಂಡಯ್ಯ-ಸೊಗಡು ಭೇಟಿ: ತುರ್ತು ಪರಿಸ್ಥಿತಿ ಅವಧಿಯ ನೆನಪುಗಳ ಮೆಲುಕು

ತುಮಕೂರು: ತುರ್ತು ಪರಿಸ್ಥಿತಿಯಲ್ಲಿ ಒಂದೂವರೆ ವರ್ಷ ಸೆರೆವಾಸ ಅನುಭವಿಸಿ, ಗೋವಾ ವಿಮೋಚನಾ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ 92 ವರ್ಷದ ವಯೋವೃದ್ಧರಾದ ವೈ.ಸಿ.ನಂಜುಂಡಯ್ಯನವರನ್ನು ಬಿಜೆಪಿಯ ಹಿರಿಯ ಮುಖಂಡ ಸೊಗಡು ಶಿವಣ್ಣನ ಭೇಟಿಯಾಗಿ ರಾಜಕೀಯ ಬೆಳವಣಿಗೆಯ ಬಗ್ಗೆೆ ಚರ್ಚಿಸಿದರು.

ಜಿಲ್ಲೆೆಯ ಕುಣಿಗಲ್ ತಾಲೂಕಿನ ಎಮ್ಮೆ ಕಾಲೋನಿಯ ವೈ.ಸಿ.ನಂಜುಂಡಯ್ಯ ಅವರ ಸ್ವಗೃಹಕ್ಕೆೆ ಭೇಟಿ ನೀಡಿದ ಸೊಗಡು ಶಿವಣ್ಣ, 1975 ರ ಕರಾಳ ತುರ್ತು ಪರಿಸ್ಥಿತಿ ಅವಧಿಯಲ್ಲಿ ಬೆಂಗಳೂರಿನ ಸಂಟ್ರಲ್ ಜೈಲ್‌ನಲ್ಲಿ ಮೀಸಾ ಬಂದಿಗಳಾಗಿದ್ದ ರಾಜಕೀಯ ದಿಗ್ಗಜರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಹೆಚ್.ಡಿ.ದೇವೇಗೌಡ, ಮಧುದಂಡವತೆ, ಎಸ್.ಮಲ್ಲಿಕಾರ್ಜುನಯ್ಯ, ಮುರುಳಿ ಮನೋಹರ ಜೋಷಿ, ಯಾದವರಾವ್ ಜೋಷಿ, ಬಾಬುರಾವ್ ದೇಶಪಾಂಡೆ, ಲಕ್ಷ್ಮೀನರಸಿಂಹಯ್ಯ, ಎ.ಕೆ. ಸುಬ್ಬಯ್ಯ, ಜಾರ್ಜ್‌ಫರ್ನಾಂಡೀಸ್, ಚರಣ್‌ಸಿಂಗ್, ತುಮಕೂರಿನ ಕಾ.ಬೋರಪ್ಪ, ಉಗ್ರಪ್ಪ, ರಾಜಾಚಾರ್, ಕೃಷ್ಣಚಾರ್, ವಿಶ್ವೇಶ್ವರಯ್ಯ, ಫ್ಲೋರ್‌ಮಿಲ್ ನರಸಿಂಹಯ್ಯ, ಡಿಪೋ ಬಸವರಾಜು, ಡಾ॥ ಚೆರಿಯನ್, ಗುರುರಾಜರಾವ್, ಸುಬ್ಬಣ್ಣ, ನಾರಾಯಣಾಚಾರ್, ಮುಂತಾದ ಸಾವಿರಾರು ರಾಷ್ಟ್ರೀಯವಾದಿಗಳೊಂದಿಗೆ ಒಂದೂವರೆ ವರ್ಷ ಜೈಲು ವಾಸದಲ್ಲಿ ಪರಸ್ಪರ ದೇಶದ ಬಗ್ಗೆೆ ಚರ್ಚಿಸುತ್ತಾ, ಭವಿಷ್ಯದ ಭಾರತದ ನಿರ್ಮಾಣಕ್ಕೆೆ ತೆಗೆದುಕೊಂಡಿದ್ದ ಚರ್ಚೆ ನಿರ್ಣಯಗಳು, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತತೆಯ ಬಗ್ಗೆೆ ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ಆರ್.ಎಸ್.ಎಸ್. ತಾಲ್ಲೂಕ್ ಪ್ರಚಾರಕ್ ನಿತ್ಯಾನಂದ ಮೂರ್ತಿ, ಬಿಜೆಪಿ ಹಿರಿಯ ಮುಖಂಡರುಗಳಾದ ಹೆಚ್.ಎನ್.ನಟರಾಜ್, ಸಿ.ಆರ್.ವೆಂಕಟೇಶ್, ದೊಡ್ಡಮಾದಪ್ಪ, ಚಲುವರಾಜು, ಜಯಸಿಂಹರಾವ್, ಹೆಬ್ಬೂರು ಸಿದ್ದೇಶ್ ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

The post ನಂಜುಂಡಯ್ಯ-ಸೊಗಡು ಭೇಟಿ: ತುರ್ತು ಪರಿಸ್ಥಿತಿ ಅವಧಿಯ ನೆನಪುಗಳ ಮೆಲುಕು appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/sogadu-meets-nanjundayya/