ಧರ್ಮ ವಿಭಜನೆ ಹೋರಾಟಕ್ಕೆ ಜಯ ಸಿಗದು

ಲಕ್ಷ್ಮೇಶ್ವರ: ಚುನಾವಣೆ ಬಂದಾಗ ಮಾತ್ರ ಕೆಲ ರಾಜಕಾರಣಿಗಳಿಗೆ ಧರ್ಮ ನೆನಪಾಗುತ್ತಿರುವುದು ನೋವಿನ ಸಂಗತಿ. ಧರ್ಮದ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಧರ್ಮ ಸಮ್ಮೇಳನದಲ್ಲಿ ವೀರಸೋಮೇಶ್ವರ ಚರಿತಾಮೃತ ಬಿಡುಗಡೆ ಮಾಡಿ ವೀರಶೈವ ಲಿಂಗಾಯತ ಧರ್ಮಗಳು ಬೇರೆ-ಬೇರೆ ಅಲ್ಲ. ಎರಡೂ ಒಂದೇ. ಧರ್ಮದಲ್ಲಿ ರಾಜಕೀಯ ಬೇರಸುವ ಕೆಲಸಕ್ಕೆ ಕೈಹಾಕುವುದು ಸರಿಯಲ್ಲ ಎಂದು ಹೇಳಿದರು.

ಕೆಲವು ರಾಜಕಾರಣಿಗಳು ಡಿ.10ರಂದು ದೆಹಲಿಯಲ್ಲಿ ಲಿಂಗಾಯತ ಮತ್ತು ವೀರಶೈವ ಧರ್ಮಗಳು ಬೇರೆ ಎಂದು ಹೋರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ಅದಕ್ಕೆ ಎಂದಿಗೂ ಜಯ ಸಿಗುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೆಲವು ರಾಜಕಾರಣಿಗಳು ಧರ್ಮದ ವಿಷಯ ಮುಂದಿಟ್ಟುಕೊಂಡು ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿರುವುದು ಸರಿಯಲ್ಲ. ರಾಜಕಾರಣದಲ್ಲಿ ಧರ್ಮವಿದ್ದರೆ ಒಳ್ಳೆಯದು. ಆದರೆ, ಧರ್ಮದಲ್ಲಿ ಬೇಡ ಎಂದರು.

The post ಧರ್ಮ ವಿಭಜನೆ ಹೋರಾಟಕ್ಕೆ ಜಯ ಸಿಗದು appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/division-of-religion-can-not-win-the-fight/