ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ನಾಳೆನೇ ಮುಹೂರ್ತ ಫಿಕ್ಸ್​ ?

ತೆಲಂಗಾಣ: ಅವಧಿಗೂ ಮೊದಲೇ ವಿಧಾನಸಭೆ ವಿಸರ್ಜಿಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ನಿರ್ಧರಿಸಿದ್ದು ಅದಕ್ಕಾಗಿ ಮುಹೂರ್ತವನ್ನೂ ಫಿಕ್ಸ್​ ಮಾಡಿದ್ದಾರೆ ಎಂದು ವರದಿಯಾಗಿದೆ.

ಭಾನುವಾರವೇ ನಡೆಸಬೇಕಿದ್ದ ಸಚಿವ ಸಂಪುಟ ಸಭೆಯನ್ನು ಸೆಪ್ಟೆಂಬರ್​ 6 ರಂದು ಮುಂಜಾನೆ 6.45ಕ್ಕೆ ಕರೆದಿದ್ದು ಅದರಲ್ಲಿ ವಿಧಾನಸಭೆ ವಿಸರ್ಜನೆ ಘೋಷಣೆ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.

6 ಸಿಎಂ ಚಂದ್ರಶೇಖರ್​ ರಾವ್​ ಅವರ ಲಕ್ಕಿ ನಂಬರ್​ ಆಗಿದ್ದು ಹಾಗಾಗಿ 6ನೇ ತಾರೀಖಿನಂದು ಬೆಳಗ್ಗೆ 6.45ಕ್ಕೆ ಸಭೆ ಕರೆದಿದ್ದಾರೆ. ಟಿಆರ್​ಎಸ್​ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆ.2ರಂದು ಚಂದ್ರಶೇಖರ್​ ರಾವ್​ ಬೃಹತ್ ರ‍್ಯಾಲಿ ನಡೆಸಿದ್ದರು.

2019ರ ಮೇ ನಲ್ಲಿ ಸರ್ಕಾರದ ಅವಧಿ ಮುಗಿಯಲಿದೆ. ಆದರೆ, ಚಂದ್ರಶೇಖರ್​ ರಾವ್ ಅವರು ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಅವಧಿಗೂ ಮುನ್ನವೇ ಸರ್ಕಾರ ವಿಸರ್ಜನೆಗೆ ಮುಂದಾಗಿದ್ದಾರೆ. ಹಾಗೇ ತಮ್ಮ ಲಕ್ಕಿ ನಂಬರ್​ನ ದಿನಾಂಕದಂದೇ ಮುಹೂರ್ತವನ್ನೂ ಫಿಕ್ಸ್​ ಮಾಡಿದ್ದಾರೆ ಎನ್ನಲಾಗಿದೆ.

***

Note from Kannada.Club : This story has been auto-generated from a syndicated feed from http://vijayavani.net/assembly-telangana-chief-minister-chandrashekhar-rao-cabinet-meeting-elections/