ತಬಾಬೀ ದೇವಿ ಬಳಗಕ್ಕೆ ಬೆಳ್ಳಿ

ಬ್ಯೂನಸ್ ಐರಿಸ್: ಪ್ರಸಕ್ತ ಋತುವಿನ ಯೂತ್ ಒಲಿಂಪಿಕ್‌ನಲ್ಲಿ ಭಾರತದ ತಬಾಬೀ ದೇವಿ ತಂಗ್ಜಾಮ್ ಅವರು ಎರಡನೇ ಬೆಳ್ಳಿ ಗೆದ್ದುಕೊಂಡರು. ಇಲ್ಲಿ ನಡೆದ ಅಂತರಾಷ್ಟ್ರೀಯ ಮಿಶ್ರ ಜುಡೋ ತಂಡದ ಸ್ಪರ್ಧೆಯಲ್ಲಿ ತಬೀಬಾ ದೇವಿ ಬಳಗ ಎರಡನೇ ಸ್ಥಾನ ಪಡೆದುಕೊಂಡಿತು.

ಭಾರತದ ಆಟಗಾರರೊಂದಿಗೆ ಆಥೆನ್ಸ್‌ ಹಾಗೂ ಬಿಜೀಂಗ್‌ನ ಪಟುಗಳು ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಗೆದ್ದು ಸಂಭ್ರಮಿಸಿದರು. ತಬೀಬಾ ಅವರು ಸೋಮವಾರ ನಡೆದ ಮಹಿಳೆಯರ 44 ಕೆ.ಜಿ ವಿಭಾಗದಲ್ಲಿ ವೇನೆಜುವೆಲಾದ ಮರಿಯಾ ಜೆಮೆನೆಜ್ ಎದುರು ಮಣಿದು ಚಿನ್ನ ಗೆಲ್ಲುವಲ್ಲಿ ವಿಫಲರಾಗಿದ್ದರು.

The post ತಬಾಬೀ ದೇವಿ ಬಳಗಕ್ಕೆ ಬೆಳ್ಳಿ appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/tababe-devi-is-silver-for-the-group/