ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ

ರಾಮನಾಥಪುರ: ಇಲ್ಲಿನ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಗೆ ಬುಧವಾರ ಚಾಲನೆ ದೊರೆತಿದ್ದು, ಒಂದು ಕೆಜಿ ಉತ್ತಮ ದರ್ಜೆ ಹೊಗೆಸೊಪ್ಪು 165 ರೂ.ಗೆ ಮಾರಾಟವಾಯಿತು.
ಪ್ಲಾಟ್ ಫಾರಂ 7 ಮತ್ತು 63 ರಲ್ಲಿ ತಂಬಾಕು ಬೇಲ್‌ಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ ಹರಾಜು ಅಧೀಕ್ಷಕರು ಮತ್ತು ವರ್ತಕರು ಇ ಹರಾಜು ಮೂಲಕ ಬೇಲ್‌ಗಳಿಗೆ ಬಿಡ್ ಕೂಗಿ ಚಾಲನೆ ನೀಡಿದರು. ಉತ್ತಮ ದರ್ಜೆಯ ಒಂದು ಕೆಜಿ ತಂಬಾಕಿಗೆ 161 ರಿಂದ 165 ರೂ ವರೆಗೆ ಮಾರಾಟವಾದವು. 7.5 ಲಕ್ಷ ರೂ. ವಹಿವಾಟು ನಡೆದಿದ್ದು, ರೈತರಿಗೆ ತಲಾ 163 ರೂ ಸರಾಸರಿ ದರ ದೊರಕಿತು.
ತಂಬಾಕು ಹರಾಜು ಶುರುವಾಗುವ ಹಿನ್ನೆಲೆಯಲ್ಲಿ ದರ ನಿರೀಕ್ಷಿಸುವ ಸಲುವಾಗಿ ಬೆಳಗ್ಗೆಯಿಂದಲೇ ಮಾರುಕಟ್ಟೆ ಬಳಿ ಅಪಾರ ರೈತರು ಜಮಾಯಿಸಿದ್ದರು. ಹರಾಜಿಗೆ ಚಾಲನೆ ದೊರತ ನಂತರ ಗಣಕೀಕೃತ ವ್ಯವಸ್ಥೆ ಮೂಲಕ ಕುತೂಹಲದಿಂದ ದರದ ವಿವರಗಳನ್ನು ವೀಕ್ಷಿಸಿದರು.
ವರ್ಗೀಕರಣಕ್ಕೆ ತಕ್ಕಂತೆ ಗ್ರೇಡ್:
ಪ್ರಾರಂಭದ ಕೆಲವು ದಿನಗಳ ವರೆಗೆ ಮುಕ್ತ ಮಾರುಕಟ್ಟೆಯಲ್ಲಿ ಬೇಲ್‌ಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಉತ್ತಮ ಸ್ಯಾಂಪಲ್ ಸೊಪ್ಪನ್ನು ತರಬೇಕು. ತಂಬಾಕಿನ ವರ್ಗೀಕರಣಕ್ಕೆ ತಕ್ಕಂತೆ ಗ್ರೇಡ್ ಮಾಡಿಸಿ, ಅನ್ಯ ಪದಾರ್ಥಗಳು ಸೇರದ ಹಾಗೆ ಎಚ್ಚರ ವಹಿಸಬೇಕು. ಹರಾಜು ಕಟ್ಟೆಯಲ್ಲಿ ತಂಬಾಕು ಬೇಲ್ ಚೀಲಗಳನ್ನು ತೆಗೆದುಕೊಂಡು ಉತ್ತಮ ರೀತಿ ತಂಬಾಕು ಬೇಲ್‌ಗಳನ್ನು ಕಟ್ಟಿಕೊಂಡು ಮಾರುಕಟ್ಟೆಗೆ ಸಾಗಿಸಬೇಕು. ಅಧಿಕ ಬೇಲ್‌ಗಳು ಅವಕವಾದರೆ ಕ್ಲಸ್ಟರ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ರೈತರಿಗೆ ಮನವಿ ಮಾಡಿದರು.
ಹರಾಜು ಅಧೀಕ್ಷಕ ಬಿ.ಶಿವರಾಂ, ಎಸ್.ಎಸ್.ಪಾಟೀಲ್, ಮುಖಂಡರಾದ ರಂಗಸ್ವಾಮಿ, ಎಚ್.ಎಸ್. ಶಂಕರ್, ಯೋಗಣ್ಣ, ಬೊಮ್ಮೇಗೌಡ, ಹನುಮೇಗೌಡ, ಕೃಷ್ಣೇಗೌಡ, ಜಗದೀಶ್, ರೈತ ಸಂಘದ ಮುಖಂಡರು ಹಾಗೂ ಬೆಳೆಗಾರರು ಇದ್ದರು.

***

Note from Kannada.Club : This story has been auto-generated from a syndicated feed from http://vijayavani.net/auction-tobacco/