ಚುನಾವಣೆ ಪ್ರಯುಕ್ತ ಮದ್ಯದಂಗಡಿ ಬಂದ್ ಆದೇಶ ಇದ್ದರೂ ತೆರೆದಿದ್ದವು ಬಾರುಗಳು

ಕರಾವಳಿ ಅಲೆ ವರದಿ

ಉಡುಪಿ : ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಯ ಚುನಾವಣೆ ಪ್ರಯುಕ್ತ ಮೂರು ಕಿ ಮೀ ವ್ಯಾಪ್ತಿಯಲ್ಲಿ ಮದ್ಯದಂಗಡಿ ಬಂದ್ ಮಾಡಲು ಉಡುಪಿ ಡೀಸಿ ಆದೇಶ ಹೊರಡಿಸಿದ್ದರೂ ನಗರಸಭಾ ವ್ಯಾಪ್ತಿಯಲ್ಲಿ ಮೂರು ಕಿ ಮೀ ವ್ಯಾಪ್ತಿಯಲ್ಲಿ ಬಾರುಗಳು ಕಾರ್ಯಾಚರಿಸಿದೆ ಎಂಬ ದೂರು ನಾಗರಿಕರಿಂದ ಕೇಳಿ ಬಂದಿದೆ.

ಉಡುಪಿ ನಗರಸಭಾ ವ್ಯಾಪ್ತಿಯ ಮೂರು ಕಿ ಮೀ ವ್ಯಾಪ್ತಿಯಲ್ಲಿ ಕಲ್ಮಾಡಿ ಸಮೀಪದ ಪಂದುಬೆಟ್ಟುವಿನಲ್ಲಿರುವ ಬಾರ್, ಕೊಡವೂರಿನಲ್ಲಿರುವ ಬಾರ್, ಕೊರಂಗ್ರಪಾಡಿ ಜಂಕ್ಷನಿನಲ್ಲಿರುವ ಬಾರ್, ಕಡೆಕಾರು ಜಂಕ್ಷನಿನಲ್ಲಿರುವ ಬಾರ್, ಮಣಿಪಾಲ- ಮಂಚಿ ರಸ್ತೆಯ ಮಣಿಪಾಲ ಚರ್ಚ್ ಸಮೀಪದಲ್ಲಿರುವ ಬಾರ್ ತೆರೆದುಕೊಂಡಿದ್ದು, ಮತದಾನ ಸಂದರ್ಭದ ಎರಡು ದಿನಗಳಲ್ಲಿ ರಾಜಾರೋಷವಾಗಿ ಮದ್ಯ ವ್ಯಾಪಾರಗಳನ್ನು ಮಾಡಿದೆ. ಇದಕ್ಕೆ ಉಡುಪಿ ಜಿಲ್ಲಾ ಅಬಕಾರಿ ಅಧಿಕಾರಿಗಳು ಸಾಥ್ ನೀಡಿರುವುದು ಒಂದೆಡೆಯಾದರೆ, ಚುನಾವಣಾ ಪ್ರಯುಕ್ತ ನಿಯೋಜನೆಗೊಂಡ ಅಬಕಾರಿ ವಿಶೇಷ ದಳ ಕೂಡಾ ಕಣ್ಮುಚ್ಚಿ ಕುಳಿತುಕೊಂಡಿತ್ತು ಎಂಬ ಆರೋಪ ನಾಗರಿಕರಿಂದ ಕೇಳಿ ಬಂದಿದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕೆಂಬ ಆಗ್ರಹ ನಾಗರಿಕರಿಂದ ವ್ಯಕ್ತವಾಗಿದೆ.

 

***

Note from Kannada.Club : This story has been auto-generated from a syndicated feed from http://karavaliale.net/in-the-case-of-elections-the-liquor-baron-was-ordered-but-the-openings-were-open/