ಗೌತಮ್​ ಗಂಭೀರ್​ ಹಣೆಗೆ ಬಿಂದಿ ಇಟ್ಟು, ದುಪ್ಪಟ್ಟಾ ತೊಟ್ಟಿದ್ದು ಏಕೆ ಗೊತ್ತಾ?

ನವದೆಹಲಿ: ಕ್ರಿಕೆಟ್​ ಮೈದಾನದಿಂದ ಹೊರಗೂ ತಮ್ಮ ವಿಭಿನ್ನ ನಿಲುವುಗಳಿಂದಾಗಿ ಕ್ರಿಕೆಟರ್​ ಗೌತಮ್​ ಗಂಭೀರ್​ ಹಲವು ಬಾರಿ ಗಮನ ಸೆಳೆದಿದ್ದಾರೆ. ಈಗ ಅವರು ಹಣೆಗೆ ಬಿಂದಿ ಇಟ್ಟು, ದುಪ್ಪಟ್ಟಾ ತೊಟ್ಟು ಸುದ್ದಿಯಾಗಿದ್ದಾರೆ.
ಹೌದು ಗೌತಮ್​ ಗಂಭೀರ್​  ದೆಹಲಿಯಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಆಯೋಜಿಸಿದ್ದ ಹಿಜ್ರಾ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ಮಂಗಳಮುಖಿಯರಂತೆ ಹಣೆಗೆ ಬಿಂದಿ ಇಟ್ಟು, ದುಪ್ಪಟ್ಟಾ ತೊಟ್ಟು, ಮಂಗಳಮುಖಿ ಸಮುದಾಯದವರನ್ನು ಗೌರವದಿಂದ ಕಾಣುವಂತೆ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಭಾರತೀಯ ದಂಡ ಸಂಹಿತೆ (ಐಪಿಸಿ)​ ಸೆಕ್ಷನ್​ 377ರ ಪ್ರಕಾರ ಸಲಿಂಗ ಕಾಮ ಅಪರಾಧವಲ್ಲ ಎಂದು   ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ನಾನು ಮಂಗಳಮುಖಿ ಸಮುದಾಯವನ್ನು ಮತ್ತು ಹಿಜ್ರಾ ಹಬ್ಬವನ್ನು ಬೆಂಬಲಿಸುತ್ತೇನೆ. ಎಲ್ಲರನ್ನೂ ಒಳಗೂಡಿಸಿಕೊಳ್ಳದಿದ್ದರೆ ನಾವು ಮುಂದುವರಿಯಲು ಸಾಧ್ಯವೇ ಇಲ್ಲ. ಅವರೂ ನಮ್ಮ ನಿಮ್ಮೆಲ್ಲರಂತೆ ಭಾರತೀಯರು. ಅವರನ್ನು ನಾವು ಗೌರವದಿಂದ ಕಾಣಬೇಕು ಎಂದು ತಿಳಿಸಿದರು. (ಏಜೆನ್ಸೀಸ್​)

***

Note from Kannada.Club : This story has been auto-generated from a syndicated feed from http://vijayavani.net/gautam-gambhir-was-spotted-wearing-a-dupatta-and-bindi/