ಕೇರಳದಲ್ಲಿ ಕೇವಲ 72 ಗಂಟೆಗಳಲ್ಲಿ ಮರು ನಿರ್ಮಾಣಗೊಂಡ ಶಾಲಾ ಕಟ್ಟಡ

ವಯನಾಡ್ : ಕೇರಳದಲ್ಲಿ ಇತ್ತೀಚೆಗೆ ಉಂಟಾದ ಭಾರೀ ಪ್ರವಾಹ ಹಾಗೂ ಭೂಕುಸಿತ ಘಟನೆಗಳಲ್ಲಿ ಬಾಧಿತವಾದ ಹಲವು ಶಾಲೆಗಳಲ್ಲಿ ವಯನಾಡ್ ಜಿಲಲೆಯ ವೈಥಿರಿ ಎಂಬಲ್ಲಿನ ಕುರಿರ್ಚೈಮಲದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡವನ್ನು ಕೇವಲ 72 ಗಂಟೆಗಳಲ್ಲಿ ನಿರ್ಮಿಸಿದ ಕಥೆಯಿದು. ಶಾಲೆಯ ಕಟ್ಟಡದ ಅರ್ಧ ಭಾಗ ಸಂಪೂರ್ಣ ಹಾನಿಗೊಂಡಿತ್ತಲ್ಲದೆ ಶಾಲೆಗೆ ಹೋಗುವ ಹಾದಿಯಲ್ಲಿನ ರಸ್ತೆಗಳು ಹಾಗೂ ಸೇತುವೆಗಳೂ ಶೋಚನೀಯ ಸ್ಥಿತಿಯಲ್ಲಿದ್ದು, ಶಾಲೆಯ ಅಂಗಣದಲ್ಲಿ ದೊಡ್ಡ ಹೊಂಡವೊಂದು ಸೃಷ್ಟಿಯಾಗಿ ವಿದ್ಯಾರ್ಥಿಗಳು ಮತ್ತೆ ಈ ಶಾಲೆಗೆ ಹೋಗುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು.

ಆಗ ನೆರವಿಗೆ ಬಂದ ಸ್ಥಳೀಯ ಮುಸ್ಲಿಂ ಮಹಳಿ ಸಮಿತಿ ತನ್ನ ಮದ್ರಸ ಕಟ್ಟಡದ ಮೇಲ್ಭಾಗದ ಸಭಾಂಗಣದಲ್ಲಿ ಶಾಲೆ ನಡೆಸಲು ಅನುಮತಿಸಿತ್ತು. ಈ ಪ್ರದೇಶದ ಮಕ್ಕಳಿಗೆ ಹತ್ತಿರದಲ್ಲಿ ಇರುವ ಕಿರಿಯ ಪ್ರಾಥಮಿಕ ಶಾಲೆ ಇದೊಂದೇ ಆಗಿದ್ದರಿಂದ ಸ್ಥಳೀಯರು ಸ್ವಯಂ ಸೇವಾ ಸಂಘಟನೆಗಳಾದ ಗ್ರೀನ್ ಪಾಲಿಯೇಟಿವ್, ಹ್ಯೂಮನ್ ಬೀಯಿಂಗ್ಸ್ ಕಲೆಕ್ಟಿವ್ ಹಾಗೂ ಮಲಬಾರ್ ಫುಡ್ ರಿಹ್ಯಾಬಿಲಿಟೇಶನ್ ಫೋರಂ ಸಹಾಯ ಪಡೆದು ಸುಮಾರು 50 ಸ್ವಯಂಸಹಾಯಕರ ಸಹಾಯದಿಂದ ಕೇವಲ 72 ಗಂಟೆಗಳಲ್ಲಿಯೇ ಮದರಸಾ ಕÀಟ್ಟಡದ ಮೇಲ್ಭಾಗದಲ್ಲಿ ಶಾಲೆಯೊಂದನ್ನು ನಿರ್ಮಿಸಿ ಮಾದರಿಯಾಗಿದ್ದಾರೆ.

ಅಲಿಘರ್ ಮುಸ್ಲಿಂ ವಾರ್ಸಿಟಿಯ ವಿದ್ಯಾರ್ಥಿಗಳು ಕಲಿಕಾ ಸಾಮಗ್ರಿ ನೀಡಿದರೆ, ಪಾಂಡಿಚೆರ್ರಿ ವಿ ವಿ ಆಟಿಕೆಗಳನ್ನು ಒದಗಿಸಿದೆ. ಜೆಎನ್ಯು ವಿದ್ಯಾರ್ಥಿಗಳಿಂದ ಆರ್ಥಿಕ ಸಹಾಯ ಬಂದರೆ ಗ್ರಂಥಾಲಯವ£ ಕೇರಳ ಶಾಲಾ ಶಿಕ್ಷಕರ ಸಂಘದ ಸಹಕಾರದಿಂದ ನಿರ್ಮಿಸಲಾಯಿತು. ಹೀಗೆ ರೂ 3.5 ಲಕ್ಷ ವೆಚ್ಚದಲ್ಲಿ ಮದರಸಾ ಕಟ್ಟಡದ ಮೇಲ್ಭಾಗದಲ್ಲಿ ಶಾಲೆ ತಲೆಯೆತ್ತಿತ್ತು. ಕಟ್ಟಡದ ನಿರ್ಮಾಣದಲ್ಲಿ ತೊಡಗಿದ ಕಾರ್ಯಕರ್ತರಿಗೆ ಹತ್ತಿರದ ಮನೆಗಳ ಮಹಿಳೆಯರು ಅಡುಗೆ ಮಾಡಿ ಆಹಾರ ಒದಗಿಸಿದರು. ಈ ಹೊಸ ಶಾಲಾ ಕಟ್ಟಡದಲ್ಲಿ ಈಗ ನಾಲ್ಕು ತರಗತಿ ಕೊಠಡಿಗಳು, ಶಿಕ್ಷಕರ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಗೋಡೆಗಳಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡುವ ಬಣ್ಣದ ಚಿತ್ತಗಾರಗಳಿವೆ.

ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿದ ಶಾಸಕ ಸಿ ಕೆ ಶಶೀಂದ್ರನ್ ಅವರು ತಮ್ಮ ಶಾಸಕರ ನಿಧಿಯಿಂದ ರೂ 1.5 ಕೋಟಿ ನೆರವನ್ನು ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.

 

***

Note from Kannada.Club : This story has been auto-generated from a syndicated feed from http://karavaliale.net/the-school-building-was-rebuilt-in-just-72-hours-in-kerala/