ಕುಡಿದು ಜಗಳ ಮಾಡುತ್ತಿದ್ದ ವ್ಯಕ್ತಿಯ ಕೊಲೆ

ಹಾಸನ: ಕುಡಿದು ಜಗಳ ಮಾಡಿದ ಎಂಬ ಕಾರಣಕ್ಕೆ ಮನೆಗೆ ನುಗ್ಗಿ ವ್ಯಕ್ತಿಯನ್ನು ಮಂಗಳವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ಬಂಬೂಬಜಾರ್​ನ ಆಟೋ ಚಾಲಕ ಕಿರಣ್ (35) ಮೃತ.

ಹತ್ಯೆ ನಡೆಸಿದ ನಗರದ ಸೀನ, ರವಿ, ನಾಗರಾಜ್, ಮಧು, ಸುಶೀಲೆಗೌಡ, ತಿಮ್ಮೇಗೌಡ ಎಂಬ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಮದ್ಯ ವ್ಯಸನಿಯಾಗಿದ್ದ ಕಿರಣ್, ಆಟೋ ಓಡಿಸಿಕೊಂಡು ಜೀವನ ನಡೆಸá-ತ್ತಿದ್ದ. ಕೆಲ ದಿನಗಳ ಹಿಂದೆ ಆಟೋ ಮಾರಿ ನಿತ್ಯವೂ ಕುಡಿದು ಎಲ್ಲರೊಂದಿಗೆ ಜಗಳ ಮಾಡುತ್ತಿದ್ದ. ಮಂಗಳವಾರ ಮಧ್ಯಾಹ್ನವೂ ಕá-ಡಿದು ಬಂದು ಪಕ್ಕದ ಮನೆಯ ನೀಲಿಗಿರಿ ಪೋಲ್ಸ್ ವ್ಯಾಪಾರಿ ನಾಗರಾಜ್ ಜತೆ ಜಗಳ ಮಾಡಿಕೊಂಡಿದ್ದ.

ಇದರಿಂದ ಕೋಪಗೊಂಡ ನಾಗರಾಜ್ ತನ್ನ ಸಹಚರರೊಂದಿಗೆ ರಾತ್ರಿ ಕಿರಣ್​ನ ಮನೆಗೆ ನುಗ್ಗಿ ಇಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಜಗಳ ಬಿಡಿಸಲು ಹೋದ ಮೃತನ ತಾಯಿ ಮಣಿಯಮ್ಮ ಹಾಗೂ ಸಹೋದರಿ ಯೋಗೇಶ್ವರಿ ಅವರನ್ನು ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರá-ವ ಪೊಲೀಸರು ಆರೋಪಿಗಳ ಪತ್ತೆ್ತಗೆ ಶೋಧ ನಡೆಸಿದ್ದಾರೆ.

***

Note from Kannada.Club : This story has been auto-generated from a syndicated feed from http://vijayavani.net/%e0%b2%95%e0%b3%81%e0%b2%a1%e0%b2%bf%e0%b2%a6%e0%b3%81-%e0%b2%9c%e0%b2%97%e0%b2%b3-%e0%b2%ae%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6-%e0%b2%b5/