ಕಾಮತೃಷೆ ನೀಗಿಸಲು ನಿರಾಕರಿಸಿದ ಬಾಲಕನ ಮರ್ಮಾಂಗ ಸುಟ್ಟ ಳು

ನೊಯ್ಡಾ : ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಬಾಲಕನ ಮರ್ಮಾಂಗವನ್ನು ಬಿಸಿ ಚಿಮ್ಟಿಯಿಂದ ವಿವಾಹಿತ ಯುವತಿಯೊಬ್ಬಳು ಸುಟ್ಟು ಗಾಯಗೊಳಿಸಿದ ಘಟನೆ ಗ್ರೇಟರ್ ನೊಯ್ಡಾದ ಚಪ್ರೌಲ ಗ್ರಾಮದಿಂದ ವರದಿಯಾಗಿದೆ. ಯುವತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ಆಕೆ ತಲೆಮರೆಸಿಕೊಂಡಿದ್ದಾಳೆ.

ಆರೋಪಿ ಯುವತಿ ತಮ್ಮ ನೆರೆಮನೆಯ ನಿವಾಸಿಯಾಗಿದ್ದು, ಈ ಹಿಂದೆಯೂ ಬಾಲಕನನ್ನು ತನ್ನ ಕಾಮತೃಷೆಗೆ ಬಳಸಲು ಯತ್ನಿಸಿದ್ದಳೆಂದು ಬಾಲಕನ ತಾಯಿ ಆರೋಪಿಸಿದ್ದಾರೆ.

ಕಳೆದ ಶುಕ್ರವಾರ ಆ ಯುವತಿ ಬಾಲಕನಿಗೆ ಯಾವುದೋ ಆಮಿಷವೊಡ್ಡಿ ತಾನೊಬ್ಬಳೇ ಮನೆಯಲ್ಲಿರುವಾಗ ಆತನನ್ನು ಮನೆಗೆ ಕರೆಸಿಕೊಂಡಿದ್ದಳೆಂದು ಪೊಲೀಸರು ಹೇಳಿದ್ದಾರೆ. ಆರೋಪಿ ಯುವತಿಯ ವಿರುದ್ಧ ಐಪಿಸಿಯ ಸೆಕ್ಷನ್ 323 (ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು), ಸೆಕ್ಷನ್ 324 (ಆಯುಧದಿಂದ ಗಾಯವುಂಟು ಮಾಡುವುದು), ಸೆಕ್ಷನ್ 342 (ದಿಗ್ಬಂಧನದಲ್ಲಿರಿಸುವುದು), ಸೆಕ್ಷನ್ 363 (ಅಪಹರಣ) ಹಾಗೂ ಸೆಕ್ಷನ್ 506 (ಬೆದರಿಕೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ, ಆಕೆಯ ವಿರುದ್ದ ಪೋಕ್ಸೋ ಅನ್ವಯ ಕೂಡ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣವನ್ನು ತಾವು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ, ಅದೇ ಸಮಯ ದೂರು ದಾಖಲಿಸಲು ಉಂಟಾದ ವಿಳಂಬವೂ ಸಂಶಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

***

Note from Kannada.Club : This story has been auto-generated from a syndicated feed from http://karavaliale.net/the-marmanga-was-burned-by-a-boy-who-refused-to-eliminate-sex/