ಕಾಡಲ್ಲಿ ಸಾಗವಾನಿ ಮರ ಕಡಿಯುತ್ತಿದ್ದವರ ಬಂಧನ

ಕರಾವಳಿ ಅಲೆ ವರದಿ

ಜೋಯಿಡಾ : ತಾಲೂಕಿನ ಅಣಶಿ ಅರಣ್ಯ ವ್ಯಾಪ್ತಿಗೆ ಬರುವ ಬಾರಗೆದ್ದಾ ಎಂಬ ಪ್ರದೇಶದಲ್ಲಿ ಅಕ್ರಮವಾಗಿ ಸಾಗವಾನಿ ಮರ ಕತ್ತರಿಸುತ್ತಿದ್ದ ಕಳ್ಳರನ್ನು ಅಣಶಿ ವಲಯದ ಅರಣ್ಯಾಧಿಕಾರಿಗಳು ಹಿಡಿದಿದ್ದಾರೆ.

ಕಾಶಿನಾಥ ವೆಳಿಪ್, ಪ್ರಭಾಕರ ವೆಳಿಪ್, ಸದಾನಂದ ವೆಳಿಪ್, ಸುಧಾಕರ ಗಾಂವ್ಕರ ಇವರನ್ನು ಬಾರಗೆದ್ದಾ ಅರಣ್ಯದಲ್ಲಿ ಅಕ್ರಮ ಸಾಗವಾನಿ ಮರ ಕಡಿಯುತ್ತಿದ್ದರಿಂದ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಬಂಧಿತರಿಂದ ಒಂದೂವರೆ ಲಕ್ಷ ರೂ ಮೌಲ್ಯದ ಸಾಗವಾನಿ ಕಟ್ಟಿಗೆ ವಶಪಡಿಸಿಕೊಳ್ಳಲಾಗಿದೆ.ಈ ಕಾರ್ಯಾಚರಣೆಯಲ್ಲಿ ಅಣಶಿ ವಲಯ ಅರಣ್ಯಾಧಿಕಾರಿ ಕಬ್ಬಿನ್ ಹಾಗೂ ಅಣಶಿ ಅರಣ್ಯ ಇಲಾಕಾ ಸಿಬ್ಬಂದಿ ಇದ್ದರು.

 

***

Note from Kannada.Club : This story has been auto-generated from a syndicated feed from http://karavaliale.net/detention-of-tapestry-trees-in-the-forest/