ಕಳವು ಪ್ರಕರಣ, ಇಬ್ಬರ ವಿಚಾರಣೆ

ಕೊಕಟನೂರ: ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದ ಎದುರು ಮಂಗಳವಾರ ಭಕ್ತರ ಚಿನ್ನಾಭರಣ ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಗಳಿ ಠಾಣೆ ಪೊಲೀಸರು ಇಬ್ಬರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಜಮಖಂಡಿ ತಾಲೂಕಿನ ಕಲಹಳ್ಳಿ ಗ್ರಾಮದ ಲಕ್ಷ್ಮೀಬಾಯಿ ಸವದಿ ಅವರಿಗೆ ಸೇರಿದ 4.5 ತೊಲ ಹಾಗೂ ಉಗಾರ ಬಿ.ಕೆ. ಗ್ರಾಮದ ಪುಷ್ಪಾ ಮಸುಡಗೆ ಅವರಿಗೆ ಸೇರಿದ 4.5 ತೊಲ ಬಂಗಾರದ ಒಡವೆಗಳು ದೇವಿ ದರ್ಶನ ಪಡೆಯಲು ನಿಂತಾಗ ಕಳುವಾಗಿದ್ದವು. ಅವರು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‌ಪಿ ರಾಮನಗೌಡ ಬಸರಗಿ, ಐಗಳಿ ಪಿಎಸ್‌ಐ ಎಂ.ಬಿ. ಬಿರಾದಾರ, ಎಎಸ್‌ಐ ಬಿ.ಎಸ್. ದೇವಮಾನೆ ಸಿಬ್ಬಂದಿ ಎಸ್.ಎಂ. ಮೇತ್ರಿ, ಮಹಾಂತೇಶ ಖೋತ, ಎಂ.ಬಿ. ಬಾಲದಾರ ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

***

Note from Kannada.Club : This story has been auto-generated from a syndicated feed from http://vijayavani.net/belgaum-theft-the-case-the-two-the-trial/