ಕನ್ನಡ ಭವನಕ್ಕಾಗಿ ಜೋಳಿಗೆ ಹಿಡಿವೆ

ಬೀದರ್: ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನದ ಕಾಮಗಾರಿಗೆ ಸರ್ಕಾರ ರಾಜ್ಯೋತ್ಸವ ದಿನದಂದು ಚಾಲನೆ ನೀಡದಿದ್ದರೆ, ಜೋಳಿಗೆ ಹಿಡಿದು ಹಣ ಸಂಗ್ರಹಿಸುವ ಅಭಿಯಾನ ಆರಂಭಿಸಿ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದ್ದಾರೆ.
ಕಸಾಪದಿಂದ ನಡೆದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಹಿರಿಯ ಜನಪದ ಸಾಹಿತಿ , ರಂಗ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅವರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿ, ಕನ್ನಡ ಭವನ ನಿಮರ್ಾಣಕ್ಕೆ ಇನ್ನು ವಿಳಂಬ ಸಹಿಸಲಾಗದು. ಕಾಮಗಾರಿ ಆರಂಭ ನ.1ರೊಳಗೆ ಆಗಲೇಬೇಕು. ನಿರ್ಲಕ್ಷೃ ಮಾಡಿದರೆ ಪರಿಷತ್ ಜೋಳಿಗೆ ಹಾಕಿ ಹಣ ಸಂಗ್ರಹಿಸಿ ಭವನ ನಿಮರ್ಾಣ ಮಾಡಲಿದೆ. ಈ ಮೂಲಕ ಸಕರ್ಾರ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದೆ ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಅದರ ಸಂವೇದನೆಗಳನ್ನು ಗಟ್ಟಿಯಾಗಿ ಅಥರ್ೈಸಿಕೊಳ್ಳಬೇಕಿದೆ. ಮಾತೃಭಾಷೆಗೆ ಮೊದಲ ಆದ್ಯತೆ ಸಿಗುವ ನಿಟ್ಟಿನಲ್ಲಿ ಎಲ್ಲರ ಪರಿಶ್ರಮ ಅಗತ್ಯ. ಕನ್ನಡ ಭವನ ನಿಮರ್ಾಣ ಬೇಗ ಆಗಲಿ ಎಂಬುದು ಗಡಿ ಕನ್ನಡಿಗರ ಆಶಯ. ಇದಕ್ಕೆ ಸಕರ್ಾರ, ಜನಪ್ರತಿನಿಧಿಗಳು ಸ್ಪಂದಿಸಬೇಕು ಎಂದರು.
ಸಂವಾದದಲ್ಲಿ ಶಂಭುಲಿಂಗ ವಾಲ್ದೊಡ್ಡಿ ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡರು. ಹಿರಿಯ ಚಿಂತಕ ಸಿದ್ದು ಯಾಪಲಪರವಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಚಾಮಾ, ಕೆ. ಗುರುಮೂರ್ತಿ, ಶಿರೋಮಣಿ ತಾರೆ ಸಂವಾದ ನಡೆಸಿಕೊಟ್ಟರು. ದೇವೇಂದ್ರ ಕರಂಜೆ ಸ್ವಾಗತಿಸಿದರು. ರಮೇಶ ಬಿರಾದಾರ ವಂದಿಸಿದರು. ಟಿ.ಎಂ.ಮಚ್ಚೆ ನಿರೂಪಣೆ ಮಾಡಿದರು.

***

Note from Kannada.Club : This story has been auto-generated from a syndicated feed from http://vijayavani.net/kasapaprograminbidar/