ಕಥಕ್ ಕಲಿಯುತ್ತಿರುವ ಆಲಿಯಾ

ಆಲಿಯಾ ಭಟ್ ಸದ್ಯ ಕರಣ್ ಜೋಹರ್ ಚಿತ್ರ `ಕಳಂಕ್’ದಲ್ಲಿ ನಟಿಸುತ್ತಿದ್ದು ಆ ಸಿನಿಮಾಗಾಗಿ ಆಕೆ ಕಥಕ್ ಡ್ಯಾನ್ಸ್ ಕಲಿಯುತ್ತಿದ್ದಾಳೆ. ಆಲಿಯಾ ಕಥಕ್ ಕಲಿಯುತ್ತಿರುವುದು ಪ್ರಖ್ಯಾತ ಕಥಕ್ ಪಟು ಬಿರ್ಜು ಮಹಾರಾಜರ ಬಳಿ.

ಆಲಿಯಾ ಒಬ್ಬಳು ಗ್ರೇಟ್ ಸ್ಟಾರ್ ಆಗಿದ್ದರೂ ಆಕೆ ಸಾಂಪ್ರದಾಯಿಕವಾಗಿ ಡ್ಯಾನ್ಸ್ ಕಲಿತಿಲ್ಲ. ಹಾಗಾಗಿ ಆಕೆಗೆ ಡ್ಯಾನ್ಸಿನ ಮುದ್ರಾ ಮುಂತಾದವುಗಳ ಬಗ್ಗೆ ಅರಿವಿಲ್ಲ. ಅದಕ್ಕಾಗಿ ಆಲಿಯಾ ಬಿರ್ಜು ಮಹಾರಾಜ್ ಅವರನ್ನು ಮೂರ್ನಾಲ್ಕು ಬಾರಿ ಭೇಟಿಯಾಗಿ ಡ್ಯಾನ್ಸಿನ ಕೆಲವು ಬೇಸಿಕ್ ಟೆಕ್ನಿಕ್ ಬಗ್ಗೆ ಟ್ರೈನಿಂಗ್ ಪಡೆಯುತ್ತಿದ್ದಾಳೆ. ಈ ಸಿನಿಮಾದಲ್ಲಿ ಡ್ಯಾನ್ಸ್ ದಿವಾ ಮಾಧುರಿ ದೀಕ್ಷಿತ್ ಕೂಡಾ ಪ್ರಮುಖ ಪಾತ್ರದಲ್ಲಿರುವುದರಿಂದ ಆಕೆಯೆದುರು ತನ್ನ ಡ್ಯಾನ್ಸ್ ನಗೆಪಾಟಲಿಗೀಡಾಗಬಾರದೆಂದು ಆಲಿಯಾ ಸಕತ್ ಡ್ಯಾನ್ಸ್ ರಿಹರ್ಸಲ್ ಮಾಡುತ್ತಿದ್ದಾಳಂತೆ.

`ಕಳಂಕ್’ ಒಂದು ಬಹುತಾರಾಗಣದ ಚಿತ್ರವಾಗಿದ್ದು ಇದರಲ್ಲಿ ಆಲಿಯಾ, ಮಾಧುರಿಯಲ್ಲದೇ ವರುಣ್ ಧಾವನ್, ಸಂಜಯ್ ದತ್, ಜಾನ್ವಿ ಕಪೂರ್, ಸೊನಾಕ್ಷಿ ಸಿನ್ಹಾ ಮೊದಲಾದವರೂ ತಾರಾಗಣದಲ್ಲಿದ್ದಾರೆ.

 

***

Note from Kannada.Club : This story has been auto-generated from a syndicated feed from http://karavaliale.net/aalia-learning-kathak/