ಎನ್‌. ಮಹೇಶ್‌ ರಾಜೀನಾಮೆ ಸುದ್ದಿ ಕೇಳಿ ಶಾಕ್‌ ಆಗಿದೆ: ಜಿ.ಟಿ. ದೇವೇಗೌಡ

ಮೈಸೂರು: ಮಹೇಶ್ ಅವರ ರಾಜೀನಾಮೆ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಈವರೆಗೂ ಮಹೇಶ್‌ ರಾಜೀನಾಮೆ ಕುರಿತು ಗೊತ್ತಿರಲಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಅವರೊಂದಿಗೆ ಮಾತನಾಡಿ ಬಳಿಕ ಪ್ರತಿಕ್ರಿಯಿಸುತ್ತೇನೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ. ಆದರೆ, ರಾಷ್ಟ್ರ ಮಟ್ಟದಲ್ಲಿ ಏನು ಚರ್ಚೆ ಆಗಿದೆಯೋ ಗೊತ್ತಿಲ್ಲ ಎಂದರು.

ದಸರಾ ಕಾರ್ಯಕ್ರಮಗಳಲ್ಲಿ ಯಾವ ಕಾಂಗ್ರೆಸ್ ನಾಯಕರು ಗೈರಾಗಿಲ್ಲ. ಕೆಲವೊಂದು ಕಾರ್ಯಕ್ರಮಗಳಿಗೆ ಕಾರಣಾಂತರಗಳಿಂದ ಬಂದಿಲ್ಲ ಅಷ್ಟೆ. ಯತೀಂದ್ರ ಬೋಟ್ ಕಾರ್ಯಕ್ರಮಕ್ಕೆ ಬಂದಿದ್ರು. ತನ್ವೀರ್ ಸೇಠ್ ನಮ್ಮ‌ ಜತೆ ದಸರಾ ಸಭೆಯಲ್ಲಿ ಭಾಗಿಯಾಗಿದ್ದರು. ಆದ್ರೆ ಪುಟ್ಟರಂಗಶೆಟ್ಟಿ ಫೋಟೊ ಇಲ್ಲ ಎಂಬುದಕ್ಕೆ ಬೇಸರ ಮಾಡಿಕೊಂಡಿದ್ದರು ಅಷ್ಟೆ. ಅದನ್ನು ಬಿಟ್ಟರೆ ನಮ್ಮ‌ಲ್ಲಿ ಯಾವುದೇ ಭಿನ್ನಪ್ರಾಯ ಇಲ್ಲ. ನಾನು ಸಹ 5 ವರ್ಷ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ. ಹಾಗಂತ ಅದನ್ನು ಭಿನ್ನಾಭಿಪ್ರಾಯ ಅಂದುಕೊಳ್ಳಬಾರದು ಎಂದು ತಿಳಿಸಿದರು.

ಮಹೇಶ್‌ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿಲು ಡಿಸಿಎಂ ನಕಾರ

ಇತ್ತ ಎನ್‌ ಮಹೇಶ್‌ ರಾಜೀನಾಮೆ ನೀಡುತ್ತಲೇ ಅಲ್ಲ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಪ್ರತಿಕ್ರಿಯಿಸಿಲು ನಿರಾಕರಿಸಿದ್ದಾರೆ. ಕೊರಟಗೆರೆಯಲ್ಲಿ ನಡೆಯುತ್ತಿದ್ದ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿದ್ದ ಪರಮೇಶ್ವರ್‌ ಅವರು ಮಾಧ್ಯಮದವರನ್ನು ಕಂಡ ಕೂಡಲೇ ಮಾತಮಾಡದೇ ತೆರಳಿದ್ದಾರೆ.

ಮಹೇಶ್‌ ರಾಜೀನಾಮೆ ಗೊತ್ತಿಲ್ಲ ತಿಳ್ಕಂಡು ಹೇಳ್ತೀನಿ

ಎನ್‌ ಮಹೇಶ್ ಸಚಿವ ಸ್ಥಾನಕ್ಕೆ ರಾಜಿನಾಮೆ ವಿಚಾರ ನನಗೇ ಗೊತ್ತಿಲ್ಲ. ತಿಳ್ಕೊಂಡು ಹೇಳ್ತಿನಿ. ಅವರ ರಾಜೀನಾಮೆ ವಿಚಾರ ನ್ಯಾಷನಲ್ ಇಶ್ಯು, ತಲೆಕಡಿಸ್ಕೊ ಬೇಡಿ ಏನು ಆಗಲ್ಲ. ಸರ್ಕಾರ ಸುಭದ್ರ ಎಂದು ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದ ಲೋಕೋಪಯೋಗಿ ಸಚಿವ ಹೆಚ್. ಡಿ. ರೇವಣ್ಣ ಪರೋಕ್ಷಕವಾಗಿ ರಾಷ್ಟ್ರ ರಾಜಕಾರಣದತ್ತ ಬೊಟ್ಟು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)

***

Note from Kannada.Club : This story has been auto-generated from a syndicated feed from http://vijayavani.net/gt-deve-gowda-n-mahesh-mysore-resignation-hd-deveanna-parameshwar/