ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಇಬ್ಬರು ಶಂಕಿತ ಆರೋಪಿಗಳು ಸಿಐಡಿ ವಶಕ್ಕೆ

ಬೆಂಗಳೂರು: ಸುಮಾರು ಮೂರು ವರ್ಷಗಳ ನಂತರ ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಮರುಜೀವ ದೊರೆತಿದ್ದು, ಹತ್ಯೆ ಪ್ರಕರಣದಲ್ಲಿ ಇಬ್ಬರು ಶಂಕಿತ ಆರೋಪಿಗಳನ್ನು ಸಿಐಡಿ ಪತ್ತೆ ಹಚ್ಚಿದೆ.

ಮೂರು ವರ್ಷಗಳ ನಂತರ ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಸಿಐಡಿಗೆ ಮೊದಲ ಸುಳಿವು ಸಿಕ್ಕಂತಾಗಿದ್ದು, ಹುಬ್ಬಳ್ಳಿ ಮೂಲದ ಗಣೇಶ ಮಿಸ್ಕಿನ್ ಮತ್ತು ಅಮಿತ್ ಬದ್ದಿ ಎಂಬುವರನ್ನು ಸಿಐಡಿ ವಶಕ್ಕೆ ಪಡೆದಿದೆ. ಅಲ್ಲದೇ ಸೆ.15ರ ವರೆಗೆ ವಶಕ್ಕೆ ನೀಡುವಂತೆ ಸಿಐಡಿ ಮನವಿ ಮಾಡಿದೆ.

ಗೌರಿ ಹತ್ಯೆಗೆ ಸಹಾಯ ರೀತಿಯಲ್ಲಿ ಕಲಬುರ್ಗಿ ಹತ್ಯೆಗೂ ಸಹಾಯ ಹಸ್ತ ಚಾಚಿದ್ದ ಶಂಕೆ ವ್ಯಕ್ತವಾಗಿದ್ದು, ಮೂವರು ಆರೋಪಿಗಳು ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಕಲೆ ಹಾಕಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಗೌರಿ ಹಾಗೂ ಕಲಬುರ್ಗಿ ಹತ್ಯೆಗೆ ಒಂದೇ ಮಾದರಿಯ ಗನ್ ಬಳಸಿರುವುದು ಪತ್ತೆಯಾಗಿದೆ.

ಎಸ್‌ಐಟಿ ತನಿಖೆ ವೇಳೆ ಮೂವರು ಆರೋಪಿಗಳು ಕಲಬುರ್ಗಿ ಹತ್ಯೆ ಸುಳಿವು ಬಿಟ್ಟು ಕೊಟ್ಟಿದ್ದು, ಅಮೋಲ್ ಕಾಳೆ, ಅಮಿತ್ ಬದ್ದಿ ಹಾಗೂ ಗಣೇಶ ಮಿಸ್ಕಿನ್ ಎಂಬ ಮೂವರು ಸುಳಿವು ಈ ಕುರಿತು ಗೌರಿ ಹತ್ಯೆ ಪ್ರಕರಣದ ತನಿಖಾ ವರದಿಯನ್ನು ಸಿಐಡಿ ಕೇಳಿದ್ದು, ಕಲಬುರ್ಗಿ ಹತ್ಯೆ ಪ್ರಕರಣವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಪುಣೆಯ ಎಟಿಎಸ್ ಪೊಲೀಸರು ವಶಪಡಿಸಿಕೊಂಡ ಆಯುಧಗಳ ಎಫ್‌ಎಸ್‌ಎಲ್ ವರದಿಗೆ ಕಾಯುತ್ತಿರುವ ಸಿಐಡಿ, ಎಫ್‌ಎಸ್‌ಎಲ್ ವರದಿ ನಂತರ ವಿಚಾರವಾದಿ ಎಂ.ಎಂ.ಕಲಬುರ್ಗಿ ಪ್ರಕರಣದ ಅಸಲಿಯತ್ತು ಬೆಳಕಿಗೆ ಬರಲಿದೆ.

The post ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಇಬ್ಬರು ಶಂಕಿತ ಆರೋಪಿಗಳು ಸಿಐಡಿ ವಶಕ್ಕೆ appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/kalburgi-murder-case-two-accused-arrest/