ಈವರೆಗಿನ ಪ್ರಮುಖ ವಿದ್ಯಾಮಾನಗಳ ಮುಖ್ಯಾಂಶಗಳು ಹೀಗಿವೆ…

1. ಮೈಸೂರು ದಸರಾ ಸಭೆಯಲ್ಲಿ ಜಟಾಪಟಿ- ಸಚಿವರ ನಡುವೆ ನಡೆಯಿತು ವಾಗ್ವಾದ- ಸಮಿತಿ ಉಪಾಧ್ಯಕ್ಷ ಮಾಡುವಂತೆ ಪುಟ್ಟರಂಗಶೆಟ್ಟಿ ಪಟ್ಟು

2. ಆಪರೇಷನ್ ಕಮಲಕ್ಕೆ ಕಾಂಗ್ರೆಸ್​ ಪ್ರತಿತಂತ್ರದ ಚರ್ಚೆ- ಸಚಿವ ಡಿಕೆಶಿ ನಿವಾಸಕ್ಕೆ ಪರಮೇಶ್ವರ್ ಭೇಟಿ- ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ

3. ದಾವಣಗೆರೆ ಗ್ರಾಮದಲ್ಲಿ 19 ಜನರ ಸಾವು ಹಿನ್ನೆಲೆ- ರಾತ್ರೋರಾತ್ರಿ ಗ್ರಾಮಕ್ಕೆ ದಿಗ್ಬಂಧನ- ಸಾವು ತಡೆಗೆ ಮೃತ್ಯುಂಜಯ ಹೋಮ ಮಾಡಿದ ಗ್ರಾಮಸ್ಥರು

4. ಉರಿಯುವ ಬೆಂಕಿಗೆ ತುಪ್ಪ- ಸಚಿವಾಕಾಂಕ್ಷಿಗಳಿಗೆ ಮತ್ತೊಂದು ಆಘಾತ- ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ, ಆಕಾಂಕ್ಷಿಗಳಿಗೆ ಪಿತೃಪಕ್ಷದ ಕಾಟ

5. ಶತಾಯಗತಾಯ ಸರ್ಕಾರ ರಚನೆಗೆ ಪ್ಲ್ಯಾನ್​- ಷಾ ಸಂಪರ್ಕದಲ್ಲಿ ಅತೃಪ್ತ ಶಾಸಕರು- ಬಿಎಸ್​ವೈ ಟೀಂಗೆ ಮಾಡು ಇಲ್ಲವೇ ಮಡಿ ಟಾಸ್ಕ್​​​​​​​​

6. ಕಾಂಗ್ರೆಸ್‌ ಬಂಡಾಯಕ್ಕೆ ದೇವೇಗೌಡರು ಗರಂ- ಸರ್ಕಾರ ನಡೆಸೋದು ಕಷ್ಟ ಅಂತಾ ವೇಣುಗೋಪಾಲ್‌ಗೆ ದೂರು- ಅಲರ್ಟ್‌ ಆದ ಕೈ ಹೈಕಮಾಂಡ್‌

7. ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತದ ಬೆಂಕಿ- ಲಂಡನ್‌ನಲ್ಲಿ ಸಿದ್ದು ಕೂಲ್‌ ಕೂಲ್‌- ಥೇಮ್ಸ್‌ನದಿ ತೀರದಲ್ಲಿ ವಾಕಿಂಗ್‌

8. ಬೆಳಗಾವಿ ಜಿಲ್ಲಾ ವಿಭಜನೆ ಹಿಂದೆ ಮಾಸ್ಟರ್‌ಪ್ಲಾನ್‌- ಗೋಕಾಕ್‌, ಚಿಕ್ಕೋಡಿ ಜಿಲ್ಲೆಗೆ ರಮೇಶ್‌ ಸಾರಥಿ- ಬ್ರದರ್ಸ್‌ ತಣಿಸಲು ಬ್ರದರ್ ತಂತ್ರ

9. ಮಂಡ್ಯದಲ್ಲಿ ಸಿಕ್ಕಿಬಿದ್ದಳು ಎಮ್ಮೆ ಕಳ್ಳಿ- ಜನರು ಬೆನ್ನಟ್ಟಿದ್ದಂತೆ ಕಾಲಿಗೆ ಬುದ್ಧಿ ಹೇಳಿದ ಮಳ್ಳಿ- ಕೊನೆಗೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

10. ರಸ್ತೆಗಳಲ್ಲೇ ಫುಲ್ ವಸೂಲಿ- ಕಾನೂನು ಹೆಸರಲ್ಲಿ ಮಾಡ್ತಾರೆ ಭರ್ಜರಿ ಕಾಸು- ಕೆಲವು ಟ್ರಾಫಿಕ್​ ಪೊಲೀಸರಿಂದ ವಸೂಲಿ ದಂಧೆ- ದಿಗ್ವಿಜಯ ನ್ಯೂಸ್ ಕಾರ್ಯಾಚರಣೆಯಲ್ಲಿ ಬಯಲು

11. ಇಂದೂ ಗಗನಮುಖಿಯಾಯ್ತು ತೈಲದರ- ಮುಂಬೈನಲ್ಲಿ ಪೆಟ್ರೋಲ್​​ಗೆ 88.67 ಪೈಸೆ- ಬೆಂಗಳೂರಲ್ಲಿ 84ರ ಗಡಿ ದಾಟಿದ ಇಂಧನ

12. ಕೋಮಾದಲ್ಲಿದ್ದ ಮಗನ ಸಾವು ಕಂಡು ಹಸುನೀಗಿದ ತಂದೆ- ಮಿದುಳು ನಿಷ್ಕ್ರಿಯಗೊಂಡಿದ್ದ ತಮ್ಮನ ಅಂಗಾಂಗ ದಾನ- ನೋವಿನಲ್ಲಿ ಮಾನವೀಯತೆ ಮೆರೆದ ಅಣ್ಣ ಗಿರೀಶ್​

13. ಮೈಸೂರು ದಸರಾಗೆ ತಾಲೀಮು- ಗಜಪಡೆಗೆ 2ನೇ ದಿನದ ಹೊರುವ ಕಸರತ್ತು- ಮರಳು ಮೂಟೆ ಹೊತ್ತು ಗಜ ಗಾಂಭೀರ್ಯ ನಡೆದ ಆನೆಗಳು

14. ಬಾಹುಬಲಿಯನ್ನು ಮೀರಿಸ್ತಿದೆ ಚಿಟ್ಟಿ- ಒಂದೇ ದಿನದಲ್ಲಿ 2.0 ದಾಖಲೆ ವೀಕ್ಷಣೆ- ಬಾಹುಬಲಿ ವೆಚ್ಚ 250 ಕೋಟಿ, ರಜಿನಿ ಚಿತ್ರದ ವೆಚ್ಚ 400 ಕೋಟಿ ರೂಪಾಯಿ

15. ಕೇಂದ್ರ ಅನುದಾನ ಕೊಟ್ರೂ ಆಗಿಲ್ಲ ರಸ್ತೆ ಅಗಲ- ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆ- ಶೃಂಗೇರಿ ಟು ಎಸ್​​​​​.ಕೆ.ಬಾರ್ಡ್​​ವರೆಗೆ ಸಂಚಾರ ಕಷ್ಟಕಷ್ಟ

16. ಮಹಾರಾಷ್ಟ್ರದಿಂದ ನಮ್ಮನ್ನ ಬಿಟ್ಟು ಬಿಡಿ- ಕರ್ನಾಟಕ ರಾಜ್ಯಕ್ಕೆ ಗ್ರಾಮವನ್ನ ಸೇರಿಸಿಕೊಳ್ಳಿ- ಠರಾವು ಪಾಸ್​ ಮಾಡಿದ್ರು ಸುಳಕೂಡದ ಗ್ರಾಮಸ್ಥರು

17. ಜಮೀನಿಗೆ ನೀರಿಲ್ಲ…ಕಾರ್ಖಾನೆಗೆ ಎಲ್ಲಾ- ದಶಕ ಕಳೆದ್ರೂ ಕನಸಾಯ್ತು ಏತ ನೀರಾವರಿ- ಚಿಂಚೋಳಿ ಜನ್ರಿಗೆ ಕೊಟ್ಟ ಮಾತು ನೆರವೇರಿಸ್ತಾರಾ ಎಚ್​ಡಿಕೆ

18. ಮಲೆಮಹದೇಶ್ವರ ಬೆಟ್ಟದಲ್ಲಿ ಕಸವೋ ಕಸ- ಕೆಲಸ ಮಾಡದೆ ಬೀಗ ಜಡಿದ ಘನತ್ಯಾಜ್ಯ ಘಟಕ- ಕ್ರಮಕ್ಕೆ ಮುಂದಾಗುತ್ತಾ ಚಾಮರಾಜನಗರ ಜಿಲ್ಲಾಡಳಿತ..?

19. ಅಯೋಧ್ಯೆಯಲ್ಲಿ 151 ಮೀಟರ್​​​ ಎತ್ತರದ ಶ್ರೀರಾಮನ ವಿಗ್ರಹ- ದೀಪಾವಳಿಗೆ ಯುಪಿ ಸಿಎಂ ಶಂಕುಸ್ಥಾಪನೆ- ವಿಗ್ರಹ ಸ್ಥಾಪನಾ ಸ್ಥಳಕ್ಕೆ ಹುಡುಕಾಟ

20. 2010ರಲ್ಲಿ ಬಾಬ್ಲಿ ಅಣೆಕಣ್ಣು ನಿರ್ಮಾಣಕ್ಕೆ ವಿರೋಧ- ಆಂಧ್ರ ಸಿಎಂ ಸೇರಿ 15 ಮಂದಿಗೆ ಸಂಕಷ್ಟ- ಮಹಾರಾಷ್ಟ್ರ ಕೋರ್ಟ್​​​ನಿಂದ ಬಂಧನದ ವಾರಂಟ್​​​​

21. ಕ್ರಿಕೆಟ್​ ಪ್ರೇಮಿಗಳಿಗೆ ಕಾದಿದೆ ಬ್ಯಾಡ್​ ನ್ಯೂಸ್​​- ಐಪಿಎಲ್​ ಫ್ಯಾನ್ಸ್​ಗೆ​ ಎದುರಾಗಲಿದೆ ಬಿಗ್​ ಶಾಕ್​- ವಿದೇಶಕ್ಕೆ ಶಿಫ್ಟ್​ ಆಗುತ್ತಾ ಐಪಿಎಲ್​

22. ‘ನಟ ಸಾರ್ವಭೌಮ’ ಚಿತ್ರಕ್ಕೆ ಶ್ರೇಯಾ, ವಿಜಯಪ್ರಕಾಶ್ ಗಾಯನ- ಪುನೀತ್​ ರಾಜ್ ಕುಮಾರ್ ಚಿತ್ರಕ್ಕೆ ಬಿಂದಾಸ್​ ಕಂಠಸಿರಿ- ಕೂತೂಹಲ ಕೆರಳಿಸಿದ ಪುನೀತ್​ ಚಿತ್ರ

23. ‘ದಂಡುಪಾಳ್ಯ-4’ ಚಿತ್ರದಲ್ಲಿ ಮುಮೈತ್ ಖಾನ್​ ಐಟಂ ಸಾಂಗ್- ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಹಾಟ್ ಸ್ಟಾರ್- ಟಾಲಿವುಡ್​ ಬೆಡಗಿಯಿಂದ ಬಿಂದಾಸ್ ಡ್ಯಾನ್ಸ್

24. ಗಣೇಶನ ಹಬ್ಬದಲ್ಲಿ ದೊಡ್ಮನೆ ಹುಡುಗರು- ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪುನೀತ್​, ರಾಘವೇಂದ್ರ ರಾಜ್​ ಕುಮಾರ್​- ನಟರ ಜತೆ ಹೆಜ್ಜೆ ಹಾಕಿದ ಜನ

(ದಿಗ್ವಿಜಯ ನ್ಯೂಸ್​)

***

Note from Kannada.Club : This story has been auto-generated from a syndicated feed from http://vijayavani.net/bengaluru-headline-politics-local-news-national-news-film-crime-sports/