ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತನ ಮೇಲೆ ಹಲ್ಲೆ; ನಟಿ ವಿರುದ್ಧ ಆರೋಪ

ಬೆಂಗಳೂರು: ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆ ಮಾಡುವುದಾಗಿ ನಂಬಿಸಿ ಕಿರುತೆರೆ ನಟಿಗೆ ವಂಚನೆ ಪ್ರಕರಣ ರಘು ಎಂಬ ಕಾರ್ಯಕರ್ತನ ಮೇಲೆ ನಟಿ ಹಾಗೂ ಸಹಚರರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ನಟಿ ಸುಷ್ಮಿತಾ ಅವರು ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತ ರಘು ಚಂದ್ರಪ್ಪ ಮೇಲೆ 6 ಜನ ಸಹಚರರೊಂದಿಗೆ ಸೇರಿ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ರಘು ಒಬ್ಬನೇ ಹಣ ಮಾಡುತ್ತಿದ್ದಾನೆ ಎಂದು ಹಲ್ಲೆ ನಡೆಸಿದ್ದು, ಕಾರು, ಹಣ ಹಾಗೂ ಲ್ಯಾಪ್​ಟ್ಯಾಪ್ ದೋಚಿದ್ದಾರೆಂದು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ನಂಬಿಸಿ ಹಣ ಪಡೆದಿದ್ದು, ಈಗ ಹಣ ವಾಪಸ್ಸು ಕೇಳಿದರೆ ರಘು ಚಂದ್ರಪ್ಪ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ, ನಟಿ ಸುಶ್ಮಿತಾ ಅವರು ಈ ಹಿಂದೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. (ದಿಗ್ವಿಜಯ ನ್ಯೂಸ್​)

***

Note from Kannada.Club : This story has been auto-generated from a syndicated feed from http://vijayavani.net/bengaluru-actress-serial-actor-sandalwood-fraud-assault/