ಅಮೆರಿಕದಲ್ಲಿ ಅನಿಲ ಪೈಪ್ ಸ್ಫೋಟ, ಒಬ್ಬ ಸಾವು, 12ಕ್ಕೂ ಹೆಚ್ಚು ಮಂದಿಗೆ ಗಾಯ

ಬೋಸ್ಟನ್: ಅಮೆರಿಕದ ಬೋಸ್ಟನ್‍‍ನ ಮೂರು ನಗರದಲ್ಲಿ 70 ಅನಿಲ ಪೈಪ್‍ಗಳು ಸ್ಫೋಟಗೊಂಡ ಪರಿಣಾಮ, ಒಬ್ಬ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಮೆರಿಕದ ಲಾರೆನ್ಸ್, ಆಂಡೋವರ್ ಮತ್ತು ನಾರ್ಥ್ ಆಂಡೋವರ್ ನಗರಗಳಲ್ಲಿ ಗುರುವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದೆ ಎಂದು ಮೆಸಾಚ್ಯುಸೆಟ್ಸ್ ಪೊಲೀಸರು ತಿಳಿಸಿದ್ದಾರೆ. ಅನಿಲ ಸ್ಫೋಟಗೊಂಡ ಪ್ರದೇಶದಲ್ಲಿ ಭಾರಿ ಪ್ರಮಾಣದ ಅನಿಲ್ ಸೋರಿಕೆಯಾಗುತ್ತಿದ್ದು, ಸುಮಾರು 20 ಕಿ.ಮೀ ವ್ಯಾಪ್ತಿವರೆಗೂ ಅನಿಲ ಸೋರಿಕೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಸದ್ಯ ಎಲ್ಲ ಗ್ಯಾಸ್ ಲೈನ್ ಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಸರಿಪಡಿಸಲು ಕೆಲ ದಿನಗಳು ಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

The post ಅಮೆರಿಕದಲ್ಲಿ ಅನಿಲ ಪೈಪ್ ಸ್ಫೋಟ, ಒಬ್ಬ ಸಾವು, 12ಕ್ಕೂ ಹೆಚ್ಚು ಮಂದಿಗೆ ಗಾಯ appeared first on ವಿಶ್ವವಾಣಿ.

***

Note from Kannada.Club : This story has been auto-generated from a syndicated feed from https://www.vishwavani.news/america-gas-explosion-onedead-12injured/