ಅಪರೂಪದ ಸನ್ನಿವೇಶ: ಅಕ್ಕ ಪಕ್ಕ ಕೂತು ಕ್ಷೇತ್ರ ಹಂಚಿಕೆ ಮಾಡಿಕೊಂಡ ದೇವೇಗೌಡ, ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರವನ್ನು ಯಾವ ಪಕ್ಷ ಹಂಚಿಕೊಳ್ಳಬೇಕು ಎಂಬುದರ ಕುರಿತಾಗಿ ಚರ್ಚಿಸಲು ಇಂದು ನಗರದ ಕೆ.ಕೆ ಗೆಸ್ಟ್​ಹೌಸ್​ನಲ್ಲಿ ಕರೆಯಲಾಗಿದ್ದ ಕಾಂಗ್ರೆಸ್​-ಜೆಡಿಎಸ್​ ಸಭೆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಸಮ್ಮಿಶ್ರ ಸರ್ಕಾರ ಬರುವುದಕ್ಕೂ ಮೊದಲು ಬದ್ಧ ವೈರಿಗಳಂತೆ ಕರೆಯಲ್ಪಡುತ್ತಿದ್ದ, ಒಂದು ಕಾಲದ ಒಡನಾಡಿಗಳೂ ಆದ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕ ಪಕ್ಕದಲ್ಲೇ ಕುಳಿತು ಪರಸ್ಪರ ಚರ್ಚೆ ನಡೆಸಿದರು. ಕರ್ನಾಟಕದ ರಾಜಕಾರಣದ ಮಟ್ಟಿಗೆ ಈ ಸನ್ನಿವೇಶ ಅತ್ಯಂತ ಅಪರೂಪದ್ದು ಎನಿಸಿಕೊಂಡಿತು.

ಈ ಸಂದರ್ಭದ ಕೆಲ ಚಿತ್ರಗಳು ಇಲ್ಲಿವೆ***

Note from Kannada.Club : This story has been auto-generated from a syndicated feed from http://vijayavani.net/hd-devegowda-and-siddaramaiah-sitting-together-and-discussed/